ಮಾರ್ಚ್ 2ರಿಂದ ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಚಿತ್ರಗಳು ಸೇರಿದಂತೆ ಯಾವುದೇ ಭಾಷೆಯ ಹೊಸ ಚಿತ್ರಗಳು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರದರ್ಶನಗೊಳ್ಳುವುದಿಲ್ಲ..!

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಇದನ್ನು ಸ್ಪಷ್ಟಪಡಿಸಿವೆ.
ಬಾಡಿಗೆ ಮೊತ್ತ ಕಡಿಮೆ ಮಾಡುವಂತೆ ಒತ್ತಾಯಿಸಿ ಯಎಫ್ಓ ಕ್ಯೂಬ್ ಮತ್ತು ಡಿಜಿಟಲ್ ಸರ್ವೀಸ್ ಪ್ರವೈಡರ್ ಸಂಸ್ಥೆಯ ವಿರುದ್ಧ ದಕ್ಷಿಣ ಭಾರತದ ನಿರ್ಮಾಪಕರು ಪ್ರತಿಭಟನೆ ಮಾಡುತ್ತಿದ್ದಾರೆ.

ಕಳೆದ ಮೂರು ತಿಂಗಳಿಂದ UFO ಮತ್ತು cubes ವೆಚ್ಚ ದುಬಾರಿ ಆಗುತ್ತಿದ್ದು, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ ರಾಜ್ಯಗಳ ನಿರ್ಮಾಪಕರು ಸಹಕಾರ ನೀಡದಿರಲು ನಿರ್ಧರಿಸಿದ್ದಾರೆ. ಮಾರ್ಚ್ 2 ರಿಂದ ಯಾವುದೇ ಕಂಟೆಂಟ್ ನೀಡದಿರಲು ತೀರ್ಮಾನಿಸಿದ್ದಾರೆ. ಶೇ.25 ರಷ್ಟು ಕಡಿಮೆ ಮಾಡಲು ಹೇಳಿದ್ದರೂ ಕೇವಲ 9 % ಮಾತ್ರ ಕಡಿಮೆ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಈ ತೀರ್ಮಾನಕ್ಕೆ ಬಂದಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರಗಳ ಪ್ರದರ್ಶನ ಮಾತ್ರವಿರುತ್ತದೆ.ಹೊಸ ಚಿತ್ರಗಳು ರಿಲೀಸ್ ಆಗಲ್ಲ. ಒಂದು ವೇಳೆ ಮಾತುಕತೆ ನಡೆದು ಸಂಧಾನವಾದಲ್ಲಿ ಈ ಸಮಸ್ಯೆ ಇರುವುದಿಲ್ಲ.







