ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯರ್’ ಸಿನಿಮಾಕ್ಕೆ ಸೆಟ್ಟೇರುವ ಮೊದಲೇ ವಿರೋಧ ವ್ಯಕ್ತವಾಗಿದೆ.

ಮೈಸೂರಿನಲ್ಲಿ ಕನ್ನಡ ಕ್ರಾಂತಿದಳ ‘ಒಡೆಯರ್’ ಟೈಟಲ್ ಗೆ ವಿರೋಧ ವ್ಯಕ್ತಪಡಿಸಿದೆ. ನಾಡು ನುಡಿಗೆ ಒಡೆಯರ್ ವಂಶಸ್ಥರು ಸಲ್ಲಿಸಿದ ಸೇವೆ ಅಪಾರವಾಗಿದೆ. ಆದ್ದರಿಂದ ಒಡೆಯರ್ ಹೆಸರಲ್ಲಿ ಕಮರ್ಷಿಯಲ್ ಸಿನಿಮಾ ಮಾಡೋದು ಖಂಡನೀಯ ಎಂದು ಸಂಘಟನೆ ಹೇಳಿದೆ.

ಶೀರ್ಷಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿರುವ ಸಂಘಟನೆ, ಒಂದು ವೇಳೆ ಹಿಂಪಡೆಯದೇ ಇದ್ದಲ್ಲಿ ಬೆಂಗಳೂರಿನಲ್ಲಿ ದರ್ಶನ್ ಮನೆ ಮುಂದೆಯೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.

ಸದ್ಯ ದರ್ಶನ್ ಅಭಿನಯದ ಕುರುಕ್ಷೇತ್ರದ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಯಜಮಾನ ಚಿತ್ರದಲ್ಲಿ ಡಿಬಾಸ್ ಬ್ಯುಸಿ ಇದ್ದಾರೆ. ಒಡೆಯರ್ ಸೆಟ್ಟೇರುವುದು ಇನ್ನೂ ಕೆಲವು ತಿಂಗಳು ತಡವಿದೆ.






