ಬಾಲಿವುಡ್ ನ ಹಿರಿಯ ನಟಿ ಶ್ರೀದೇವಿ ( 54) ಇನ್ನಿಲ್ಲ.ಶನಿವಾರ ರಾತ್ರಿ ದುಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹದಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದರು.

ಶ್ರೀದೇವಿ ಅವರು 1963 ರಲ್ಲಿ ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ್ದರು. ತನ್ನ 4ನೇ ವಯಸ್ಸಲ್ಲೇ ತಮಿಳಿನಿ ‘ತುನೈವಾನ್ ‘ ಸಿನಿಮಾ ಮುಖೇನ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. 1971ರಲ್ಲಿ ಮಲೆಯಾಳಂನ ಪೊಂಪಟ್ಟಾ ಚಿತ್ರದ ನಟನೆಗೆ ಬಾಲನಟಿ ಪ್ರಶಸ್ತಿಗೆ ಪಾತ್ರರಾಗಿದ್ದರು.

ಮುಂದಿನ ದಿನಗಳಲ್ಲಿ ಹಿಂದಿ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದಿದ್ದರು. ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲೂ ಮಿಂಚಿದ್ದಾರೆ.

ಕನ್ನಡದಲ್ಲಿ ‘ಭಕ್ತ ಕುಂಬಾರ’, ‘ಬಾಲ ಭಾರತ’, ‘ಸಂಪೂರ್ಣ ರಾಮಾಯಣ’, ‘ಯಶೋಧ ಕೃಷ್ಣ’, ‘ಹೆಣ್ಣು ಸಂಸಾರದ ಕಣ್ಣು’ ಮತ್ತು ‘ಪ್ರಿಯಾ’ ಚಿತ್ರಗಳಲ್ಲಿ ಶ್ರೀದೇವಿ ಅಭಿನಯಿಸಿದ್ದರು.







