ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಮನವಿ ಮಾಡೋ ನೆಪದಲ್ಲಿ ನಟ ಹುಚ್ಚ ವೆಂಕಟ್ ಶ್ರೀಮುರುಳಿ ವಿರುದ್ಧ ಮಾತಾಡಿದ್ದಾರೆ.
ಹುಚ್ಚವೆಂಕಟ್ ವೀಡಿಯೋ ಹರಿಬಿಟ್ಟಿದ್ದು ಅದರ ಪೂರ್ಣಪಾಠ ಇಲ್ಲಿದೆ.
ನಾನು ಶಿವರಾಜ್ ಕುಮಾರ್ ಗೆ ರಿಕ್ವೆಸ್ಟ್ ಮಾಡೋದು. ದಯವಿಟ್ಟು ನಿಮ್ಮ ಜೊತೆ ಸೆಕೆಂಡ್ ಹೀರೋ , ತರ್ಡ್ ಹೀರೋ ಅಂತ ಪಿಚ್ಚರ್ ಮಾಡ್ಬೇಡಿ. ರಾಜ್ ಕುಮಾರ್ ಅವರಾದಮೇಲೆ ನೀವೇ ಅವರ ಹೆಸರು ಉಳಿಸ್ತಾ ಇರೋರು. ನಿಮ್ಮ ರೇಂಜ್ ಏನಿದೆ. ಅದನ್ನು ಕೆಳಗಡೆ ಬಿಡಬೇಡಿ. ಸಂಬಂಧಗಳು, ಸಂಬಂಧಿಕರು ಅಂತ ಹೋಗಿ ಯಾರ್ ಯಾರದ್ದೋ ಸಿನಿಮಾ ಮಾಡ್ಕೊಂಡು , ಕೆಲವು ಕಡೆ ವಿಲನ್ ಗಳನ್ನೇ ಹೀರೋ ಮಾಡ್ತಾರೆ. ನೀವು ಹೀರೋ ರೀ ಹೀರೋ ಆಗಿಯೇ ಇದ್ದು ಬಿಡಿ, ವಿಲನ್ ನ ಹೀರೋ ಆಗೋಕೆ ಬಿಡಬೇಡಿ.
ನಿಮ್ಮ ಒಳ್ಳೇಗುಣ ಇದೆ, ನೀವು ಎಲ್ಲರನ್ನೂ ಪ್ರೀತಿಸ್ತೀರ, ಎಮೋಷನಲ್ ಆಗ್ತೀರ, ಕಣ್ಣೀರ್ ಹಾಕಿ ಬಿಡ್ತೀರ…! ಮಾಡಣ ಬಿಡು ಅಂದ್ಬಿಟ್ಟು, ಬಟ್ ಸೆಟ್ಟಲ್ಲಿ ನಿಮ್ಮನ್ನು ಸೆಕೆಂಡ್ ಹೀರೋ ತರ ತೋರ್ಸ್ ಬಿಡ್ತಾರೆ. ನೀವು ಯಾವತ್ತೂ ಹೀರೋ, ಅವರುಗಳು ಇನ್ನೂ ಸೈಡ್ ಆರ್ಟಿಸ್ಟ್, ಜೂನಿಯರ್ ಆರ್ಟಿಸ್ಟ್. ಅರ್ಥ ಆಯ್ತಾ…?
ನಿಮ್ಮ ಕಟೌಟ್ ಗಿಂತ ಒಂದೇ ಒಂದು ಇಂಚು ಆ ವ್ಯಕ್ತಿಯ ಕಟೌಟ್ ಬಂದ್ರೂ ನಾನು ಬೇಜಾರ್ ಪಡ್ತೀನಿ. ಅರ್ಥ ಆಯ್ತಾ…?
ಅಲ್ವಾ…? ಅದ್ಯಾರೋ ಒಬ್ಬ ರೋರಿಂಗ್ ಸ್ಟಾರ್ ಅಂತ ತಗೊಂಡಿದ್ದಾನಲ್ಲ ಶ್ರೀಮುರುಳಿ , ಶಿವರಾಜ್ ಕುಮಾರ್ ಕೆನ್ ರೋಲ್, ಕೆನ್ ಹೀರೋ. ಆ ಪಿಚ್ಚರ್ ಯಾವುದು ಮಾಡಿದ್ದು…?ನಿಮ್ಮ ಸಂಬಂಧಿಕರಿರಬಹುದು, ನಾವು ನಿಮ್ಮ ಸಂಬಂಧಿಕರಲ್ವಾ…? ನಮಗೆ ನೋವಾಗುತ್ತೆ , ನಿಮ್ದು ಮುರುಳಿದು ಒಂದೇ ಕಟೌಟ್ ಮಂಡ್ಯದಲ್ಲಿ ಹಾಕಿದ್ರು, ಒಂದೇ ಹೈಟ್ ಕಟೌಟ್, ಅವ್ನು ನಿಮ್ ಮುಂದೆ ಚಿಕ್ ಹುಡ್ಗ . ಆ ಮಟ್ಟಕ್ಕೆ ಬೇಕ…? ಸಂಬಂಧಗಳಂತ ಸೋಲ್ತೀರ…, ಪ್ರೀತಿ ಕೊಡ್ತೀರ..ಅದನ್ನು ಉಳಿಸ್ಕೊಳ್ಬೇಕು ಅವ್ರು , ಇಲ್ದಿದ್ರೆ ನಿಮ್ ತನನ್ನ ನೀವು ಕಳೆದುಕೊಳ್ತೀರ.ಬೇಡ, ಹುಚ್ಚವೆಂಕಟ್ ಎಷ್ಟೋ ವ್ಯಕ್ತಿಗಳನ್ನು ನಂಬಿ ಮೋಸ ಹೋದ ನೀವು ಮೋಸ ಹೋಗ್ಬೇಡಿ. ನಿಮ್ಮನ್ನು ಬಾಳ ಪ್ರೀತಿಸ್ತೀವಿ.
ರಾಜ್ ಕುಮಾರ್ ಫ್ಯಾಮಿಲಿ ಅವರೇ ,ಪುನೀತ್ ರಾಜ್‌ಕುಮಾರ್ ಅವರಿಗೂ ಹೇಳ್ತಾ ಇದ್ದೀನಿ. ಬ್ರದರ್, ನೆವರ್ ಡು ಮೂವಿಸ್ , ಯಾಕಂದ್ರೆ, ನೀವು ಹುಡುಗರು ಅಂತ ಮೂವಿ ಮಾಡಿದ್ರಿ. ಅದು ನಂಗೆ ಇಷ್ಟವಾಗಿಲ್ಲ.ಯು ಶುಡ್ ನಾಟ್ ಡು. ರಾಜ್ ಕುಮಾರ್ ಫ್ಯಾಮಿಲಿ ಇವತ್ತು ಕಲೇಲಿ ಮೆಂಟೈನ್ ಮಾಡ್ತಿದೆ. ಕಲೆ ಇಲ್ಲ ಅಂತಾಗಿದ್ರೆ ಇವತ್ತು ಶಿವರಾಜ್ ಕುಮಾರ್ ನಿಲ್ಲೋಕಾಗ್ತಿರ್ಲಿಲ್ಲ, ಪುನೀತ್ ರಾಜ್ ಕುಮಾರ್ ನಿಲ್ಲೋಕಾಗ್ತಿರ್ಲಿಲ್ಲ. ಅಥವಾ ರಾಘವೇಂದ್ರ ರಾಜ್ ಕುಮಾರ್ ಕೂಡ ನಿಲ್ಲೋಕ ಆಗ್ತಿರ್ಲಿಲ್ಲ. ತಂದೆಯಿಂದ ಬಂದ ಕಲೆ ಇರುತ್ತೆ, ತಾಯಿ ಆಶೀರ್ವಾದ ಇರುತ್ತೆ. ಹಂಗೆ ನಿಮ್ದು ಕಲೆ ಇದೆ.
ಇದು ನಾನ್ ಆಸೆ ಪಡೋದು. ಯಾವುದೇ ಕಾರಣಕ್ಕೂ ಇನ್ಮೇಲೆ, ನಿಮ್ಮ ಸಂಬಂಧಗಳು, ಫ್ರೆಂಡ್ ಶಿಪ್ ಏನೇ ಇರ್ಲಿ. ಅದು ಸಿನಿಮಾದಲ್ಲಿ ಬೇಡ. ಯಾಕಂದ್ರೆ ನಿಮ್ಮನ್ನು ಕರೆದುಬಿಟ್ಟು ,ಪ್ರೀತಿ ಅಂತ ತೋರಿಸ್ಬಿಟ್ಟು, ಬೇರೆತರ ದುರುಪಯೋಗ ಪಡಿಸಿಕೊಳ್ತಾರೆ. ಲಾಸ್ಟ್ ಗೆ ನಮಗೆ ನೋವಾಗುತ್ತೆ, ನಿಮ್ಮನ್ನು ಪ್ರೀತ್ಸೋರಿಗೆ. ಶಿವರಾಜ್ ಕುಮಾರ್ ಎಂಥಾ ಆರ್ಟಿಸ್ಟ್ , ಎಂಥಾ ವ್ಯಕ್ತಿ, ಎಂಥಾ ಒಳ್ಳೇ ಮನುಷ್ಯ ಅವ್ರು, ಅವರ ಜೊತೆ ಪಕ್ಕದಲ್ಲಿ ಯಾರೋ ಜೂನಿಯರ್ ಆರ್ಟಿಸ್ಟ್ , ಸೈಡ್ ಆರ್ಟಿಸ್ಟ್, ಪಾಸಿಂಗ್ ಶಾಟ್ ಮಾಡೋರೆಲ್ಲಾ ಪಕ್ಕದಲ್ಲಿ ನಿಂತ್ಕೋತ್ತಾರೆ. ಇದು ಬೇಕ…?
ವಿಲನ್ಸ್ ವಿಲನ್ಸೇ…! ಹೀರೋ ಆಗೋಕೆ ಆಗಲ್ಲ…! ವಿಲನ್ಸ್ ನ ಕಂಡಮ್ ಮಾಡ್ತಿಲ್ಲ. ವಿಲನ್ಸ್ ಇದ್ರೇನೇ ಹೀರೋ, ವಿಲನ್ಸ್ ಇಲ್ದೇನೂ ಹೀರೋ ಇರ್ತಾರೆ ಎಂದಿದ್ದಾರೆ.