ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ಕೆಲ ಸಮಯ ಕಳೆಯುವ ಮೂಲಕ ಅವರ ಕನಸು ನನಸು ಮಾಡಿದ್ದಾರೆ.
ಸಿನಿಮಾ , ರಿಯಾಲಿಟಿ ಶೋ, ಕ್ರಿಕೆಟ್ ಹೀಗೆ ಒಂದಲ್ಲ ಒಂದರಲ್ಲಿ ಸದಾ ಬ್ಯುಸಿ ಇರುವ ಸುದೀಪ್ ಅವರು ಸೋಮವಾರ ಅಭಿಮಾನಿಗಳಿಗಾಗಿ ಸಮಯ ಮೀಸಲಿಟ್ಟಿದ್ದರು.
ನೆಚ್ಚಿನ ಕಿಚ್ಚನನ್ನು ಭೇಟಿಯಾಗಬೇಕು ಎಂಬುದು ಅಭಿಮಾನಿಗಳ ಮಹದಾಸೆಯಾಗಿತ್ತು. ಸುದೀಪ್ ಹುಟ್ಟುಹಬ್ಬವನ್ನು ಕೂಡ ಆಚರಿಸಲು ಅವಕಾಶ ಸಿಕ್ಕಿರಲಿಲ್ಲ. ಸುದೀಪ್ ತನ್ನ ಹುಟ್ಟುಹಬ್ಬ ಆಚರಿಸುವುದು ಬೇಡ ಎಂದಿದ್ದರು. ಆದ್ದರಿಂದ ಬಹುದಿನಗಳ ಕಾಲ ಸುದೀಪ್ ಅವರನ್ನು ಭೇಟಿ ಮಾಡೋ ಚಾನ್ಸ್ ಸಿಕ್ಕಿರ್ಲಿಲ್ಲ.
ಸೋಮವಾರ ಕಿಚ್ಚನ ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು ಕೇಕ್ ಕತ್ತರಿಸಿ , ಫೋಟೋ ಕ್ಲಿಕ್ಕಿಸಿ ಸಂಭ್ರಮಪಟ್ಟರು.