ಮಂಕಿ ಮ್ಯಾನ್ , ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಜೋಗ ಜಲಾಪತದಲ್ಲಿ ನಾಪತ್ತೆಯಾಗಿದ್ದಾರೆ.
ಮೃತ ದೇಹದ ಶೋಧಕ್ಕೆ ಇಳಿದಿದ್ದ ಜ್ಯೋತಿರಾಜ್ ಮರಳಿ ಬಂದಿಲ್ಲ.
ಜೋಗಕ್ಕೆ ತೆರಳುವ ಮುನ್ನ ಸೆಲ್ಫಿ ವೀಡಿಯೋ ಮಾಡಿದ್ದ ಅವರು ಜೀವಂತವಾಗಿ ಬರುತ್ತೇನೋ ಇಲ್ಲವೋ ಗೊತ್ತಿಲ್ಲ. ಸಹಾಯ ಮಾಡಬೇಕು ಎಂಬ ದೃಷ್ಟಿಯಲ್ಲಿ ಹೋಗುತ್ತಿದ್ದೇನೆ. ಇಡೀ ಕರ್ನಾಟಕದ ಜನತೆಯ ಆಶೀರ್ವಾದ ಬೇಕು ಎಂದು ಹೇಳಿದ್ದರು.
ಜೀವನ ಮುಖ್ಯ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದಾನಂತೆ.ಅವನ ಶವ ತೆಗೆಯಲು ಹೋಗುತ್ತಿದ್ದೇನೆ ಎಂದಿದ್ದರು.
ತನ್ನ ಸಾಹಸದಿಂದ ಸ್ಯಾಂಡಲ್ ವುಡ್ ಗೂ ಪಾದಾರ್ಪಣೆ ಮಾಡಿದ್ದರು. ಜೊತೆಗೆ 2020ರ ಒಲಂಪಿಕ್ಸ್ ಭಾಗವಹಿಸಲು ಎದುರು ನೋಡುತ್ತಿದ್ದರು. ಜೊತೆಗೆ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುವವರಿದ್ದರು.