ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ದೇಶದ ಪ್ರಧಾನಮಂತ್ರಿಯಾಗಲಿ ಎಂದು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.
ಐಸಿಸಿ 2018 ರ ಅಂಡರ್ 19 ವಿಶ್ವಕಪ್ ವಿಜೇತ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಬಹುಮಾನದ ವಿಚಾರದಲ್ಲಿನ ಅಸಾಮಾನತೆ ಬಗ್ಗೆ ದನಿ ಎತ್ತಿದ್ದರು.
ವಿಶ್ವಕಪ್ ಗೆದ್ದ ತಂಡದಲ್ಲಿ ನನಗೊಬ್ಬನಿಗೆ 50ಲಕ್ಷ ರೂ, ತಂಡದ ಆಟಗಾರರಿಗೆ 30ಲಕ್ಷ ರೂ, ಸಹಾಯಕ ಸಿಬ್ಬಂದಿಗೆ 20ಲಕ್ಷ ರೂ ನೀಡುವುದು ಸರಿಯಲ್ಲ ಎಂದು ದ್ರಾವಿಡ್ ಸಮಾನವೇತನಕ್ಕೆ ಆಗ್ರಹಿಸಿದ್ದರು.
ದ್ರಾವಿಡ್ ಅವರ ಆಗ್ರಹಕ್ಕೆ ಒಪ್ಪಿದ ಬಿಸಿಸಿಐ ಸಮಾನ ಬಹುಮಾನ ಹಣ ನೀಡಿತ್ತು. ಅದರಂತೆ ದ್ರಾವಿಡ್ ಸಹ 25 ಲಕ್ಷ ರೂ ಬಹುಮಾನ ಪಡೆದಿದ್ದರು.
ಇವರ ನಿರ್ಧಾರವನ್ನು ಸಾವಿರಾರು ಮಂದಿ ಶ್ಲಾಘಿಸಿದ್ದರು. ದ್ರಾವಿಡ್ ಪ್ರಧಾನಿಯಾಗಲಿ, ಎಲ್ಲರಿಗೂ ಮಾದರಿ ವ್ಯಕ್ತಿಯಾಗಲಿ ಎಂದು ಟ್ವೀಟರ್ ನಲ್ಲಿ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಟ್ವೀಟಿಗರು #RahulDravidforPM (ರಾಹುಲ್ ದ್ರಾವಿಡ್ ಫಾರ್ ಪಿಎಂ’ ಎಂದು ಟ್ವೀಟ್ ಮಾಡುತ್ತಿದ್ದಾರೆ.