ತಂಪುಪಾನೀಯದಲ್ಲಿ ಮತ್ತು ಬರೋ ಔಷಧ ಹಾಕಿ ಕಾಮುಕನೊಬ್ಬ ಅಕ್ಕನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ?
ಆರೋಪಿ ಮಂಜುನಾಥ್. ಈತ ತನ್ನ ಅಕ್ಕನ 13 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಮಂಜುನಾಥ್ ಗೆ ಆತನ ಚಿಕ್ಕಮ್ಮ ಕೂಡ ಸಹಕರಿಸಿದ್ದಾರೆ ಎಂಬ ಆರೋಪವಿದೆ. ಸಂತ್ರಸ್ತ ಬಾಲಕಿಯ ತಾಯಿ ಈ ವಿಷಯವನ್ನು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 11ಗಂಟೆ ಸುಮಾರಿಗೆ ನಾನು ಚಿಕ್ಕಮ್ಮನ ಮನೆಗೆ ಹೋದೆ. ಚಿಕ್ಕಮ್ಮ ನನಗೆ ಕುಡಿಯಲು ಜ್ಯೂಸ್ ನೀಡಿದರು. ತಲೆ ಸುತ್ತುಬಂತು. ಆಗ ನನ್ನ ಮಾವ ಬಂದು ಅಸಭ್ಯವಾಗಿ ವರ್ತಿಸಿದ. ನಾನು ನಿರಾಕರಿಸಿದರೂ ಆತ ಬಿಡಲಿಲ್ಲ. ತಬ್ಬಿಕೊಂಡು ಅತ್ಯಾಚಾರ ಎಸಗಿದ. ಅವನು ಹೋದ ಬಳಿಕ ಚಿಕ್ಕಮ್ಮ ಬಂದು ಇಲ್ಲಿ ನಡೆದ ವಿಷಯವನ್ನು ಯಾರಿಗಾದರು ಹೇಳಿದರೆ, ಜೀವಸಹಿತ ಬಿಡುವುದಿಲ್ಲ ಎಂದು ಹೇಳಿದರು ಎಂದು ಸಂತ್ರಸ್ತೆ ದೂರದನಲ್ಲಿ ತಿಳಿಸಿದ್ದಾಳೆ.
ನನ್ನ ಮಗಳನ್ನು ಮದುವೆ ಮಾಡಿಕೊಳ್ಳೋ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ. ಆರೋಪಿಗಳ ವಿರುದ್ಧ ಸೂಕ್ತಕ್ರಮ ಜರುಗಿಸಬೇಕು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ಮಂಜುನಾಥ್ ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆತನ ಚಿಕ್ಕಮ್ಮ ತಲೆಮರೆಸಿಕೊಂಡಿದ್ದಾಳೆ.