ಸ್ಯಾಂಡಲ್ ವುಡ್ ನಲ್ಲಿ ಟಿ10 ಕ್ರಿಕೆಟ್…! ಯಾರಿಗೆಲ್ಲಾ ಅವಕಾಶವಿದೆ…?

Date:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಯಾವಾಗಲೂ ಹೊಸತನವನ್ನು ಬಯಸ್ತಾರೆ. ಸದಾ ಬ್ಯುಸಿ ಇರ್ತಾರೆ. ಸಿನಿಮಾ, ರಿಯಾಟಿ ಶೋ, ಕ್ರಿಕೆಟ್ ಹೀಗೆ ಎಲ್ಲದರಲ್ಲೂ ಕಿಚ್ಚ ಅಭಿಮಾನಿಗಳನ್ನು ಗೆದ್ದಿದ್ದಾರೆ.


ಸಿಸಿಎಲ್ ಮೂಲಕ ಕ್ರಿಕೆಟ್ ನಲ್ಲಿ ಗುರುತಿಸಿಕೊಂಡಿರುವ ಸುದೀಪ್ ಸಿಸಿಎಲ್ ಮತ್ತು ಐಪಿಎಲ್ ಮಾದರಿಯಲ್ಲಿ ಮತ್ತೊಂದು ಕ್ರಿಕೆಟ್ ಲೀಗ್ ಆರಂಭಿಸಲು ಮುಂದಾಗಿದ್ದಾರೆ.
ಹೌದು ಇದು 10ವೋವರ್ ಗಳ ಲೀಗ್ ಆರಂಭಿಸಲು ಉದ್ದೇಶಿಸಿದ್ದಾರೆ. ಇದಕ್ಕೆ ‘ಕೆಸಿಸಿ ಟಿ-10’ (ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್) ಎಂದು ಹೆಸರಿಸಲಾಗಿದೆ.


ಈ ಲೀಗ್ ನಲ್ಲಿ ಸಿಸಿಎಲ್ ಮತ್ತು ಕೆಪಿಎಲ್ ನಲ್ಲಿ ಆಡಿದವರೂ ಪಾಲ್ಗೊಳ್ಳುವರು. ಸ್ಯಾಂಡಲ್ ವುಡ್ ನಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಇರೋರನ್ನು,‌ಒಳ್ಳೆಯ ಆಟಗಾರರನ್ನು ಗುರುತಿಸಿ ಅವರನ್ನೆಲ್ಲಾ ಒಂದು ತಂಡದಲ್ಲಿ ಸೇರಿಸಿಕೊಂಡು ಆಡಿಸೋ ಯೋಚನೆ ಸುದೀಪ್ ಅವರದ್ದು.
ಕೆಸಿಸಿ ಟಿ 10 ಲೀಗ್ ನಲ್ಲಿ 6 ತಂಡಗಳು ಇರಲಿವೆ. ಪ್ರತಿ ತಂಡದಲ್ಲಿ 12 ಆಟಗಾರರು ಇರುತ್ತಾರೆ. ಪ್ರತಿ ತಂಡದಲ್ಲಿ ಒಬ್ಬರು ಮಾತ್ರ ಸ್ಟಾರ್ ಇರುತ್ತಾರೆ. ಪ್ರತಿ ತಂಡದಲ್ಲಿ ಸಿಸಿಎಲ್ ಆಡಿರುವ ಮೂವರು ಆಟಗಾರರು ಇರ್ತಾರೆ. ಲಕ್ಕಿ ಡ್ರಾ ಮೂಲಕ ಇವರ ಆಯ್ಕೆಯಾಗುತ್ತದೆ.ಅದೇ ರೀತಿ ಕರ್ನಾಟಕ ರಾಜ್ಯ ತಂಡದಿಂದ ಇಬ್ಬರು ಆಟಗಾರರು ತಂಡದಲ್ಲಿರುತ್ತಾರೆ. ಇವರ ಆಯ್ಕೆ ಕೂಡ ಲಕ್ಕಿ ಡ್ರಾ ಮೂಲಕ ಎಂದು ಸುದೀಪ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.


ಪ್ರತಿತಂಡಕ್ಕೆ ಒಬ್ಬರು ಮಾಲೀಕರಿರುತ್ತಾರೆ. ಕಲಾವಿದರು, ಬರಹಗಾರರು, ತಂತ್ರಜ್ಞರು, ಮಾಧ್ಯಮದವರು ಸಹ ಆಡಬಹುದು. ಅವರನ್ನು ಮುಂಚಿತವಾಗಿ ಆಯ್ಕೆ ಮಾಡಿದ ಬಳಿಕ ಟೀಂ ಅನ್ನು ಪ್ರಕಟಿಸಲಿದ್ದಾರೆ.

ಜಾಕ್ ಮಂಜು, ಕೆ.ಪಿ ಶ್ರೀಕಾಂತ್, ಕೃಷ್ಣ, ನಂದಕಿಶೋರ್, ಇಂದ್ರಜಿತ್ ಲಂಕೇಶ್, ಸದಾಶಿವ ಶೆಣೈ ಆಂತರಿಕ ಸಮಿತಿ ಮೇಲ್ವಿಚಾರಕರಾಗಿರುತ್ತಾರೆ.  ಮಾರ್ಚ್ 10 ರಂದು ತಂಡದ ಆಯ್ಕೆ ನಡೆಯಲಿದೆ. ಏಪ್ರಿಲ್ 7 ಮತ್ತು 8ರಂದು ಲೀಗ್ ಗೆ ಚಾಲನೆ ಸಿಗಲಿದೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...