ಸಿನಿಮಾ ಕಲಾವಿದರಿಗೆ ನಿವೇಶನ ನೀಡಬೇಕು ಎಂದು ಕನ್ನಡ ಸಿನಿಮಾ ಕಲಾವಿದರ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಶಾಸಕ ಅಂಬರೀಶ್ ಒತ್ತಾಯಿಸಿದ್ದಾರೆ.
ಗಾಂಧಿನಗರದಲ್ಲಿ ನಡೆದ ಸಿನಿಮಾ ಒಕ್ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದ ಅಂಬರೀಶ್ ಗಾಂಧಿನಗರದಲ್ಲಿ ಮುಂದಿನ 30 ವರ್ಷಗಳಿಗೆ ಕನ್ನಡ ಸಿನಿಮಾ ಕಲಾವಿದರ ಫೆಡರೇಶನ್ ಕಚೇರಿ ಗುತ್ತಿಗೆ ನೀಡಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಗೆ ಅಂಬರೀಶ್ ಮನವಿ ಸಲ್ಲಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದ್ , ರಾಕ್ ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಸೂರಪ್ಪ ಬಾಬು ಉಪಸ್ಥಿತರಿದ್ದರು.