ಕ್ರೇಜಿಸ್ಟಾರ್ ರವಿಚಂದ್ರನ್ , ರಾಕ್ ಸ್ಟಾರ್ ರೋಹಿತ್ (ಆರ್ ಜೆ ರೋಹಿತ್) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಬಕಾಸುರ’ ದ ಟ್ರೇಲರ್ ರಿಲೀಸ್ ಆಗಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ.
ಕರ್ವ ಖ್ಯಾತಿಯ ನಿರ್ದೇಶನ ನವನೀತ್ ಬಕಾಸುರನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಾವ್ಯಗೌಡ ಈ ಚಿತ್ರದ ನಾಯಕಿ. ಈ ಸಿನಿಮಾ ಮೂಲಕ ಅವರು ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ರವಿಚಂದ್ರನ್ ದೊಡ್ಡ ಬ್ಯುಸ್ ನೆಸ್ ಮನ್ ಆಗಿ , ರೋಹಿತ್ ಲಾಯರ್ ಆಗಿ ಕಾಣಿಸಿಕೊಂಡಿದ್ದಾರೆ. ರಘುಭಟ್, ಮಕರಂದ್ ದೇಶ್ ಪಾಂಡೆ, ಶಶಿಕುಮಾರ್, ಸುಚೇಂದ್ರ ಪ್ರಸಾದ್, ಸಾಧುಕೋಕಿಲ ಮತ್ತಿತರರು ಚಿತ್ರದಲ್ಲಿದ್ದಾರೆ.
ಇಲ್ಲಿದೆ ಟ್ರೇಲರ್ . ಖಂಡಿತಾ ನಿಮಗೆ ಇಷ್ಟ ಆಗುತ್ತೆ. ಸಿನಿಮಾ ಮೇಲಿನ ನಿಮ್ಮ ನಿರೀಕ್ಷೆ ದುಪ್ಪಟ್ಟಾಗುತ್ತೆ.