ಕನ್ನಡ ಬಿಗ್ ಬಾಸ್ ಸೀಸನ್ 5 ರ ರನ್ನರ್ ಅಪ್ ದಿವಾಕರ್ ಅವರು ಹೊಸ ಕಾರೊಂದನ್ನು ಖರೀದಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿಹಿತಿಂದು ದಿವಾಕರ್ ಅವರ ಹೊಸ ಕಾರನ್ನು ಓಡಿಸಿದ್ದಾರೆ.
ಹೌದು, ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ ದಿವಾಕರ್…ಒಂದು ಟೈಮಲ್ಲಿ ಬೈಕ್ ಲೋನ್ ಕಟ್ಟಲಾಗದೆ ಪರದಾಡುತ್ತಿದ್ದರು. ಬಿಗ್ ಬಾಸ್ ರಿಯಾಲಿಟಿ ಶೋ ಇವರ ಜೀವನದ ದಿಕ್ಕನ್ನು ಬದಲಾಯಿಸಿದೆ. ದಿವಾಕರ್ ಅವರಿಗೆ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಲು ಆಫರ್ ಬರುತ್ತಿದೆ.
ಇದೀಗ ದಿವಾಕರ್ ಕೆಂಪುಬಣ್ಣದ ಸ್ವಿಫ್ಟ್ ಕಾರನ್ನು ಖರೀದಿಸಿದ್ದಾರೆ. ಕಾರು ಖರೀದಿಸಿದ ಅವರು ತಮ್ಮ ಮನೆಗೆ ಅದನ್ನು ತೆಗೆದುಕೊಂಡು ಹೋಗುವ ಬದಲು ಜೆಪಿ ನಗರಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಅಲ್ಲಿ ಸುದೀಪ್ ಅವರಿಗೆ ಸಿಹಿ ನೀಡಿದ್ದಾರೆ. ಸಿಹಿ ತಿಂದ ಸುದೀಪ್ ಕಾರು ಒಂದು ರೌಂಡ್ ಕಾರು ಓಡಿಸಿದ್ದಾರೆ. ಇದರಿಂದ ದಿವಾಕರ್ ಫುಲ್ ಖುಷ್ ಆಗಿದ್ದಾರೆ.