‘ಕಿರಿಕ್ ಪಾರ್ಟಿಯ’ ಮನದರಸಿ, ‘ಅಂಜನಿಪುತ್ರ’ ನ ಚೆಲುವೆ, ‘ಚಮಕ್’ ಕೊಟ್ಟ ನಟಿ ರಶ್ಮಿಕಾ ಮಂದಣ್ಣ 61ವರ್ಷದ ಹಳೆಯ ಸೀರೆ ತೊಟ್ಟು ಪ್ರಶಸ್ತಿ ಸ್ವೀಕರಿಸಿದ್ದಾರೆ….!
ಹೌದು, ರಶ್ಮಿಕಾ ಅವರ ಅಜ್ಜಿ ತನ್ನ ಮದುವೆಯಲ್ಲಿ ತೊಟ್ಟಿದ್ದ ಸೀರಿಯನ್ನು ಕೂರ್ಗಿ ಸ್ಟೈಲ್ ನಲ್ಲಿ ತೊಟ್ಟು ‘ಜೀ ವಾಹಿನಿಯ ‘ಹೆಮ್ಮೆಯ ಕನ್ನಡಿಗ’ ಪ್ರಶಸ್ತಿ ಸ್ವೀಕರಿಸಿದರು.
ನಾನು ಬೆಳೆದಿದ್ದು ಅಜ್ಜಿ ಬಳಿ.. ನಾನು ಜೀವನದಲ್ಲೇನೋ ಆಗುವೆ ಎಂದು ಅಜ್ಜಿ ಯಾವಾಗಲೂ ಹೇಳ್ತಿದ್ರು. ಅವರು ನಮ್ಮನ್ನ ಬಿಟ್ಟು ಹೋದಾಗ ನನಗೆ ಕೋಪ ಬಂದಿತ್ತು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈಗ ಅಜ್ಜಿ ನನ್ನನ್ನು ನೋಡಿ ಹೆಮ್ಮೆ ಪಡುತ್ತಿರಬಹುದು. ಅವರ ಸೀರೆ ಧರಿಸಿ ಪ್ರಶಸ್ತಿ ಸ್ವೀಕರುಸುತ್ತಿರೋದಕ್ಕೆ ಹೆಮ್ಮೆಯಾಗಿದೆ ಎಂದು ರಶ್ಮಿಕಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.