ಚಿನ್ನದ ಜಿಲ್ಲೆಯ ಕೀರ್ತಿಯನ್ನು ಇಂಗ್ಲೆಂಡ್‍ಗೆ ಮುಟ್ಟಿಸಿದ ಡಾ. ತಸ್ಮೀಯಾ ತಬಾಸ್ಸುಮ್

Date:

ರಾಜ್ಯದ ಗಡಿ ಹಂಚಿಕೊಂಡಿರುವ ಕೋಲಾರದಂತಹ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಇಂಗ್ಲೆಂಡ್‍ವರೆಗೂ ಚಿನ್ನದ ಗಣಿಯ ಕೀರ್ತಿ ಹಂಚಿದವರು ಡಾ. ತಸ್ಮೀಯಾ ತಬಾಸ್ಸುಮ್. ಮದುಮೇಹ ತಜ್ಞೆಯಾಗಿ 15 ವರ್ಷಗಳ ಸುದೀರ್ಘ ವೈದ್ಯಕೀಯ ಅನುಭವ ಹೊಂದಿರುವ ಡಾ. ತಸ್ಮೀಯಾ ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಪ್ರೈಮ್ ಕೇರ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದ ಹಲವು ಪ್ರಕರಣಗಳನ್ನು ಯಶಸ್ವಿಯಾಗಿ ನಿಬಾಯಿಸಿ, ವೈದ್ಯಕೀಯ ಲೋಕದಲ್ಲಿ ಚಿರಪರಿಚಿತರಾಗಿದ್ದಾರೆ.


ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ಡಾ. ತಸ್ಮೀಯಾ, ಲಂಡನ್‍ನ ರಾಯಲ್ ಕಾಲೇಜ್ ಪಿಜಿಸಿಯನ್ ಯುಕೆಯಲ್ಲಿ ಎಂಆರ್‍ಸಿಪಿ (ಮ್ಯಾಗ್ನೆಟಿಕ್ ರಿಸೋನೆನ್ಸ್ ಕೋಲಾಂಜೀಯೋ ಪ್ಯಾನ್ಕ್ರಿಯೊಟೋಗ್ರಾಪಿ), ರಾಯಲ್ ಕಾಲೇಜ್ ಆಫ್ ಜನರಲ್ ಪ್ರಾಕ್ಟಿಷನರ್ಸ್‍ನಲ್ಲಿ ಎಂಆರ್‍ಸಿಜಿಪಿ ಮತ್ತು ಇಂಗ್ಲೆಂಡ್‍ನ ಲೀಸೆಸ್ಟರ್ ವಿಶ್ವವಿದ್ಯಾಲಯದಲ್ಲಿ ಡಯಾಬಿಟಾಲಜಿಯ ಡಯಾಬಿಟಿಸ್ ಕ್ಷೇತ್ರದಲ್ಲಿ ಪಿಜಿ ಡಿಪ್ಲೋಮಾ ಪೂರ್ಣಗೊಳಿಸಿ ಇಂಗ್ಲೆಂಡ್‍ನ ಪೀಟರ್‍ಬರ್ಗ್ ಡಿಸ್ಟ್ರಿಕ್ಟ್ ಹಾಸ್ಪಿಟಲ್‍ನ ಔಷಧಿ ವಿಭಾಗದಲ್ಲಿ ವೈದ್ಯಕೀಯ ವೃತ್ತಿ ಜೀವನ ಆರಂಭಿಸಿದರು. ಅದಲ್ಲದೇ ಇಂಗ್ಲೆಂಡ್‍ನ ಪ್ರತಿಷ್ಠಿತ ರಾಯಲ್ ಕಾಲೇಜ್ ಆಫ್ ಪಿಜಿಸಿಯನ್‍ನಲ್ಲಿ ಸದಸ್ಯರಾಗಿರುವ ಡಾ. ತಸ್ಮೀಯಾ ಕೋಲಾರದ ಹೆಸರನ್ನು ವಿದೇಶದಲ್ಲಿ ಕಂಗೋಳಿಸುವಂತೆ ಮಾಡಿದವರು.


ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದ್ದ ಹಲವು ಪ್ರಕರಣಗಳನ್ನು ನಿಬಾಯಿಸಿರುವ ಡಾ. ತಸ್ಮೀಯಾ ಅವರ ಆಯ್ದ ವಿಶೇಷ ಪ್ರಕರಣಗಳನ್ನು ಗಮನಿಸಿದರೆ ಅವರ ವೃತ್ತಿಪರತೆಯ ಅರಿವಾಗುತ್ತದೆ. 5ನೇ ಮಗುವಿಗೆ ಜನ್ಮನೀಡಬೇಕಾದ 21 ವರ್ಷ ವಯಸ್ಸಿನ ಯುವತಿ ಹೈಪರ್ ಥೈರಾಯ್ಡ್ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಮರ್ಪಕ ಪ್ರಾಥಮಿಕ ಚಿಕಿತ್ಸೆಯಿಲ್ಲದೇ ಪರಿಸ್ಥಿತಿ ಕೈ ಮೀರುತ್ತಿರುವ ಸಂದರ್ಭದಲ್ಲಿ ಡಾ. ತಸ್ಮೀಯಾ ಅವರ ನಿರಂತರ ಚಿಕಿತ್ಸೆ ಮತ್ತು ಅವಲೋಕನದಿಂದ ಆ ಮಹಿಳೆ ಆರೋಗ್ಯವಾಗಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯಯುತವಾಗಿದ್ದಾರೆ. ಇನ್ನೊಂದು ಡಯಾಬಿಟಿಸ್‍ನ ವಿಚಿತ್ರ ಪ್ರಕರಣದಲ್ಲಿ 977 ಮಿ.ಗ್ರಾಂ/ಡಿಎಲ್ ಪ್ರಮಾಣದ ಅತಿ ಹೆಚ್ಚು ಸಕ್ಕರೆ ಮಟ್ಟ ಹೊಂದಿದ್ದ ವ್ಯಕ್ತಿ ಡಾ.ತಸ್ಮೀಯಾ ಹತ್ತಿರ ಚಿಕಿತ್ಸೆಗೆ ದಾಖಲಾದಾಗ ಸಮರ್ಪಕ ಚಿಕಿತ್ಸೆ ಮತ್ತು ಸಲಹೆಗಳೊಂದಿಗೆ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು 780 ಮಿ.ಗ್ರಾಂ/ಡಿಎಲ್‍ಗೆ ತಗ್ಗಿಸಿ, ಅವನನ್ನು ಆರೋಗ್ಯವಂತನಾಗಿಸಿರುವುದು ವೈದ್ಯಕೀಯ ಲೋಕದಲ್ಲೊಂದು ಅಚ್ಚರಿ.


ಇಂಗ್ಲೆಂಡ್‍ನ ಎನ್‍ಎಚ್‍ಎಸ್ ಲಿಸೆಸ್ಟರ್ ಆಸ್ಪತ್ರೆಯಲ್ಲಿ ಡಯಾಬಿಟೀಸ್ ಕ್ಷೇತ್ರದಲ್ಲಿ ತರಬೇತಿ ಪಡೆದಿರುವ ಡಾ. ತಸ್ಮೀಯಾ ಮಕ್ಕಳು, ಯುವಕರು, ಗರ್ಭಿಣಿ ಮಹಿಳೆಯರು ಸೇರಿ ಎಲ್ಲ ರೀತಿಯ ಮದುಮೇಹ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಮಿಂಚು ಹರಿಸಿರುವ ಡಾ. ತಸ್ಮೀಯಾ ಅವರಿಗೆ ಬಾಲ್ಯದಲ್ಲಿ ಕ್ರೀಡೆ ಎಂದರೆ ಬಲು ಇಷ್ಟ. ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಶಾಲೆ ಪ್ರತಿನಿಧಿಸಿರುವ ಇವರು, ಸಮಯ ಸಿಕ್ಕಾಗಲೆಲ್ಲಾ ಕವನ, ಕಥೆಗಳನ್ನು ಗೀಚುತ್ತಿದ್ದರು. 3 ಮಕ್ಕಳ ತಾಯಿಯಾಗಿರುವ ಡಾ. ತಸ್ಮೀಯಾ ಮನೆಯ ಜತೆ 24/7 ಸೇವೆ ಬೇಡುವ ವೈದ್ಯಕೀಯ ವೃತ್ತಿ ಸರಿದೂಗಿಸುತ್ತಿರುವುದು ನಿಜಕ್ಕೂ ಸಾಧನೆ.

-ಅವಿನಾಶ್

Share post:

Subscribe

spot_imgspot_img

Popular

More like this
Related

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ 

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ  ಬೆಂಗಳೂರು: ರಾಜ್ಯದ...

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌ ಬೆಂಗಳೂರು: ಗ್ಯಾರಂಟಿ...