ನಟಿ ದೀಪಿಕಾ ಪಡುಕೋಣೆ ವರ್ಕೌಟ್ ಮಾಡೋಕೆ ಅಂತ ಜಿಮ್ ಗೆ ಹೋಗಿದ್ರು. ಜಿಮ್ ಹೊರಗೆ ಕತ್ರಿನಾ ಕೈಫ್ ಕಾರು ನಿಂತಿತ್ತು. ಅದನ್ನು ನೋಡಿದ ದೀಪಿಕಾ ಒಳಗೆ ಹೋಗದೆ ವಾಪಾಸ್ಸಾಗಿದ್ದಾರೆ.
ಬೆನ್ನು ನೋವಿನಿಂದ ಬಳಲುತ್ತಿರುವ ದೀಪಿಕಾ ಸೆಲಬ್ರಿಟಿ ಟ್ರೈನರ್ ಯಾಸ್ಮಿನ್ ಕರ್ಚಿವಾಲಾ ಅವರ ಫಿಟ್ನೆಸ್ ಕ್ಲಾಸ್ ಗೆ ಹೋಗಿದ್ದಾರೆ. ಜಿಮ್ ಹತ್ತಿರ ಹೋಗುತ್ತಿದ್ದಂತೆ ಅಲ್ಲಿದ್ದ ಕತ್ರಿನಾ ಕೈಫ್ ಕಾರನ್ನು ನೋಡಿ ಹಿಂತಿರುಗಿದ್ದಾರೆ.
ದೀಪಿಕಾ ಮತ್ತು ಕತ್ರಿನಾ ಇಬ್ಬರೂ ರಣವೀರ್ ಕಪೂರ್ ನ ಮಾಜಿ ಪ್ರೇಯಸಿಯರಾಗಿದ್ದು, ಇಬ್ಬರೂ ಒಬ್ಬರನ್ನೊಬ್ಬರು ನೋಡಲು ಇಷ್ಟಪಡಲ್ಲ. ಕತ್ರಿನಾ ಅವರ ಕಾರಿನ ನಂಬರ್ ತಿಳಿದಿರುವ ದೀಪಿಕಾ ಜಿಮ್ ನಲ್ಲಿ ಕತ್ರಿನಾ ಇರೋದನ್ನು ನೋಡಿ ಯೂಟರ್ನ್ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.