ಶುಕ್ರವಾರ ಬಂತೆಂದರೆ ಸಾಕು ಸಿನಿಹಬ್ಬ…! ಸ್ಯಾಂಡಲ್ ವುಡ್ ನ ಸಿನಿರಸಿಕರು ಯಾವ ಸಿನಿಮಾ ರಿಲೀಸ್ ಆಗುತ್ತಂತ ಕಾಯ್ತಿರ್ತಾರೆ. ತಮ್ಮ ನೆಚ್ಚಿನ ನಟನ ಸಿನಿಮಾ ಈ ಶುಕ್ರವಾರ ರಿಲೀಸ್, ಮುಂದಿನ ವಾರ ರಿಲೀಸ್ ಅಂತ ಅಭಿಮಾನಿಗಳು ಲೆಕ್ಕಾಚಾರ ಹಾಕ್ತಿರ್ತಾರೆ. ಆದರೆ ಇಂದು ಚಿತ್ರಮಂದಿರಗಳೇ ಬಂದ್ ಆಗಿವೆ.ಯಾವ ಸಿನಿಮಾಗಳೂ ರಿಲೀಸ್ ಆಗಿಲ್ಲ.
ಬಾಡಿಗೆ ಮೊತ್ತ ಕಡಿಮೆ ಮಾಡುವಂತೆ ಒತ್ತಾಯಿಸಿ ಯಎಫ್ಓ ಕ್ಯೂಬ್ ಮತ್ತು ಡಿಜಿಟಲ್ ಸರ್ವೀಸ್ ಪ್ರವೈಡರ್ ಸಂಸ್ಥೆಯ ವಿರುದ್ಧ ದಕ್ಷಿಣ ಭಾರತದ ನಿರ್ಮಾಪಕರು ಪ್ರತಿಭಟನೆ ಮಾಡುತ್ತಿದ್ದಾರೆ.
ಕಳೆದ ಮೂರು ತಿಂಗಳಿಂದ UFO ಮತ್ತು cubes ವೆಚ್ಚ ದುಬಾರಿ ಆಗುತ್ತಿದೆ. ಈ ಸಮಸ್ಯೆ ವಿರುದ್ಧ ದಕ್ಷಿಣ ಭಾರತ ವಾಣಿಜ್ಯ ಮಂಡಳಿ ಈ ತೀರ್ಮಾನಕ್ಕೆ ಬಂದಿದೆ. ನಾಳೆ ಹಳೆಯ ಸಿನಿಮಾಗಳ ಪ್ರದರ್ಶನವಿದೆ.