ಪ್ರವಾಸ ಅಂದ್ರೇ ಯಾರಿಗ್ ತಾನೇ ಇಷ್ಟ ಇಲ್ಲ ಹೇಳಿ? ಕಾಡು ಮೇಡು ಸುತ್ತೋದು, ಟ್ರಕ್ಕಿಂಗ್, ಬೈಕ್ ರೈಡಿಂಗ್, ಫೈರ್ ಕ್ಯಾಂಪ್ ಹೀಗೆ ಮೋಜು ಮಸ್ತಿ ಜೊತೆ ಮನಸ್ಸಿಗೆ ರಿಲ್ಯಾಕ್ಸ್ ನೀಡುವ ಪ್ರವಾಸ ಎಲ್ಲರಿಗೂ ಮೆಚ್ಚಿನ ಆಯ್ಕೆ.
ತಿಂಗಳುಗಟ್ಲೇ ಪ್ಲಾನ್ ಮಾಡ್ಕೊಂಡು ಪ್ರವಾಸಕ್ಕೆ ನಿಂತರೂ ಏನೋ ಮಿಸ್ ಆಗೇ ಆಗಿರುತ್ತೇ. ಸರಿಯಾದ ರೂಟ್ ಗೊತ್ತಿರಲ್ಲ, ಎಲ್ಲಿ ರುಚಿಕಟ್ಟಾದ ಊಟ ಸಿಗುತ್ತೆ, ಪ್ರಯಾಣ ಮಾಡಲು ಎಲ್ಲೆಲ್ಲಿ ಬಸ್, ರೈಲು, ಲಾಂಚ್ ವ್ಯವಸ್ಥೆ ಇದೇ ಎಂಬುದು ಗೊತ್ತಿರುವುದಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಅನೇಕ ವೆಬ್‍ಸೈಟ್, ಆ್ಯಪ್‍ಗಳು ಪ್ರವಾಸಿಗರಿಗೆ ಮಾರ್ಗದರ್ಶನ ನೀಡುತ್ತವೆ.
ಇಂತಹ ಆ್ಯಪ್‍ಗಳಲ್ಲಿ ಟ್ರಿಪ್ ಎನ್ ಹಾಲ್ (trip n howl) ಕೂಡ ಒಂದು.
ಟ್ರಿಪ್ ಎನ್ ಹಾಲ್ ಆ್ಯಪ್ ಎಲ್ಲಿಂದ ಎಲ್ಲಿಗೆ ಪಯಣ, ಯಾವ ರೀತಿಯ ಪ್ರಯಾಣ, ಏನೇನು ಅವಶ್ಯಕ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಅದೇ ರೀತಿ ಬಸ್, ರೈಲು, ಟ್ಯಾಕ್ಸಿ, ಕಾರ್, ಬೈಕ್ ಬುಕ್ ಮಾಡಲು ಸಹ ಆಯ್ಕೆಯಿದ್ದು, ಇಷ್ಟದ ಸೇವಾ ಪೊರೈಕೆದಾರರ ವಾಹನದಲ್ಲಿ ಪ್ರಯಾಣಿಸಬಹುದು. ವಾಸ್ತವ್ಯಕ್ಕಾಗಿ ಹೋಟೆಲ್, ರೂಂ ಬುಕ್ಕಿಂಗ್‍ಗೂ ಆಯ್ಕೆ ನೀಡಿದ್ದು, ಬಜೆಟ್‍ಗೆ ಸರಿ ಹೊಂದುವ ಲಾಡ್ಜ್ ಗಳಲ್ಲಿ ಉಳಿಯುವ ಅವಕಾಶ ಟ್ರಿಪ್ ಎನ್ ಹಾಲ್‍ನಲ್ಲಿದೆ.
ಇದಷ್ಟೇ ಅಲ್ಲದೇ, ಸಮೀಪದಲ್ಲಿನ ಎಟಿಎಮ್, ಬ್ಯಾಂಕ್, ಕಾಫಿಕೇಫೆ, ಪೆಟ್ರೋಲ್ ಬಂಕ್, ಆಸ್ಪತ್ರೆ, ಹೋಟೆಲ್, ಪ್ರವಾಸಿ ತಾಣಗಳು, ರೆಸ್ಟೋರೆಂಟ್, ಶಾಪಿಂಗ್ ಮಾಲ್, ಚಿತ್ರಮಂದಿರಗಳ, ಪೊಲೀಸ್ ಠಾಣೆ ಕುರಿತು ಕ್ಷಣದಲ್ಲೇ ಮಾಹಿತಿ ನೀಡುವ ಆ್ಯಪ್ ಅಂಗೈಲ್ಲಿ ಜಗತ್ತಿನ ದರ್ಶನ ಮಾಡಿಸುತ್ತದೆ. ಇದರ ಜತೆಗೆ ಆ್ಯಪ್‍ನಲ್ಲಿ ಫೀಡ್ ಆಯ್ಕೆ ನೀಡಿರುವುದದರಿಂದ ಫೇಸ್‍ಬುಕ್‍ನಂತೆ ಕಾರ್ಯನಿರ್ವಹಿಸುತ್ತಿದ್ದು, ಬಳಕೆದಾರರು ಮತ್ತೊಬ್ಬ ಬಳಕೆದಾರರ ಜತೆ ಸ್ನೇಹಿತರಾಗಬಹುದು ಮತ್ತು ಅವರ ಟ್ರಿಪ್‍ಗಳಲ್ಲಿ ಭಾಗಿಯಾಗುವ ಅವಕಾಶ ನೀಡಿರುವುದು ವಿಶೇಷ.