ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಆರಂಭದಿಂದಲೂ ಕುತೂಹಲ ಹೆಚ್ಚಿಸುತ್ತಲೇ ಬಂದಿದೆ. ಚಿತ್ರದ ಆಕರ್ಷಣೆಗಳಲ್ಲಿ ಯಶ್ ಸವಾರಿ ಮಾಡೋ ಬೈಕ್ ಕೂಡ ಒಂದು…! ಯಶ್ ಜಬರ್ದಸ್ತ್ ಆಗಿ ಕುಳಿತ ಬೈಕ್ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ.
ಈ ಬೈಕ್ ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ…? ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಅವರು ವಿನ್ಯಾಸಗೊಳಿಸಿರುವ ಬೈಕ್ ಇದು. ಈ ರಾಯಲ್ ಎನ್ ಫಿಲ್ಡ್ ಟ್ರಯಂಪ್ ಬೈಕನ್ನು ಚಿತ್ರಕ್ಕಾಗಿ ಡಿಸೈನ್ ಮಾಡಲಾಗಿದೆ. ಈ ಬೈಕ್ ಡಿಸೈನ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.