ಕಣ್ಣ ಸನ್ನೆ ಮೂಲಕ ಹುಡುಗರ ನಿದ್ರೆಗೆಡಿಸಿದ ಕಣ್ಣಾಟದ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಬಾಲಿವುಡ್ ಗೆ ಎಂಟ್ರಿಕೊಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗ್ತಿದೆ.
ತನಗೆ ರಣವೀರ್ ಸಿಂಗ್, ಶಾರೂಖ್ ಖಾನ್ ಮತ್ತು ಸಿದ್ಧಾರ್ಥ್ ಜೊತೆ ನಟಿಸೋ ಆಸೆ ಇದೆ ಎಂದು ಪ್ರಿಯಾ ಸಂದರ್ಶನವೊಂದರಲ್ಲಿ ಹೇಳಿದ್ರು.
ಈಗ ಈ ಬೆಡಗಿಗೆ ರಣವೀರ್ ಸಿಂಗ್ ಜೊತೆ ನಟಿಸೋ ಸುವರ್ಣಾವಕಾಶವೊಂದು ಲಭಿಸಿದೆ ಎಂದು ಹೇಳಲಾಗ್ತಿದೆ. ‘ಚೆನ್ನೈ ಎಕ್ಸ್‌ಪ್ರೆಸ್’ ಖ್ಯಾತಿಯ ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಬಾ’ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆ ಪ್ರಿಯಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಇದೇ ರೋಹಿತ್ ಶೆಟ್ಟಿ ನಿರ್ದೇಶನದ ಮತ್ತೊಂದು ಸಿನಿಮಾ ಹಾಗೂ ಕರಣ್ ಜೋಹಾರ್ ನಿರ್ಮಾಣದ ‘ಗೋಲ್ ಮಾಲ್ ಅಗೈನ್’ ಚಿತ್ರದಲ್ಲೂ ಪ್ರಿಯಾ ಅಭಿನಯಿಸುತ್ತಾರೆ ಎಂದು ಹೇಳಲಾಗ್ತಿದೆ.