ವಾಷಿಂಗ್ಟನ್ ನಲ್ಲಿ ಪಾನೀಯ ಟಿನ್ ಒಳಗೆ ಸತ್ತ ಇಲಿಯೊಂದು ಪತ್ತೆಯಾಗಿದೆ…!
ಜೋಶ್ ಹೆನ್ಲೆ ಎಂಬುವವರು ಅರ್ಕಾನ್ಸಾಸ್ ನ ಪೆಟ್ರೋಲ್ ಬಂಕ್ ಬಳಿ ರೆಡ್ ಬುಲ್ ತಂಪು ಪಾನೀಯ ಖರೀದಿಸಿದ್ದರು. ಅದರಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಹೆನ್ಲೆ ಅವರು ಫೇಸ್ ಬುಕ್ ಪೇಜ್ ನಲ್ಲಿ ಅದಕ್ಕೆ ಸಂಬಂಧಿಸಿದ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ. ಟನ್ ಅನ್ನು ಕತ್ತರಿಯಲ್ಲಿ ಕತ್ತರಿಸಿ ಫೋಟೋ ಹಾಕಿದ್ದಾರೆ.
ತಾನು ರೆಡ್ ಬುಲ್ ಕುಡಿಯುತ್ತೇನೆ ತನಗೆ ಕಾರ್ಖಾನೆಯ ಅವರ ತಪ್ಪೋ ,ಮತ್ತಾರದ್ದು ತಪ್ಪೋ ಗೊತ್ತಿಲ್ಲ. ಆದರೆ, ರೆಡ್ ಬುಲ್ ಟಿನ್ ಒಳಗೆ ಇಲಿಯೊಂದು ಸತ್ತು ಬಿದ್ದಿದೆ ಎಂದು ಹೇಳಿಕೊಂಡಿದ್ದಾರೆ.
ಹೆನ್ಲೆ ಅರ್ಧ ಪಾನೀಯವನ್ನು ಕುಡಿದು ಕಾರಿನಲ್ಲಿ ಬಿಟ್ಟು ಹೋಗಿದ್ದರು.ಮಾರನೇ ದಿನ ಅದನ್ನು ಚೆಲ್ಲಲು ಹೋಗಿದ್ದಾಗ ಶಬ್ಧ ಕೇಳಿದೆ. ಅದನ್ನು ನೋಡಿದಾಗ ಅದರಲ್ಲಿ ಇಲಿ ಇತ್ತು. ಅದು ಹೊರಗಿನಿಂದ ಹೋಗಿರಲು ಸಾಧ್ಯವಿಲ್ಲ. ಈ ಮೊದಲು ನನ್ನ ಕಾರಿನಲ್ಲಿ ಇಲಿಗಳನ್ನು ನೋಡಿಯೇ ಇಲ್ಲ ಎಂದು ಹೆನ್ಲಿ ಹೇಳಿದ್ದಾರೆ.