ಬಾಂಗ್ಲಾವನ್ನು‌ ಮಣಿಸಿದ ಭಾರತ

Must read

ಶ್ರೀಲಂಕಾದಲ್ಲಿ ನಡೆಯುತ್ತಿರುವ ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳ ನಡುವಿನ‌ ತ್ರಿಕೋನ ಟಿ20 ಸರಣಿಯಲ್ಲಿ ಭಾರತ ಬಾಂಗ್ಲಾವನ್ನು 17 ರನ್ ಗಳಿಂದ ಮಣಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗಧಿತ 20 ಓವರ್ ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.
ಭಾರತದ ಪರ ನಾಯಕ ರೋಹಿತ್ ಶರ್ಮಾ 89, ಶಿಖರ್ ಧವನ್ 35, ಸುರೇಶ್ ರೈನಾ 47 ಹಾಗೂ ದಿನೇಶ್ ಕಾರ್ತಿಕ್ ಅಜೇಯ 2 ರನ್ ಗಳ ಕೊಡುಗೆ ನೀಡಿದರು.


ಸವಾಲಿನ ಮೊತ್ತ ಬೆನ್ನತ್ತಿದ ಬಾಂಗ್ಲಾ ಭಾರತದ ಬೌಲರ್ ಗಳ ದಾಳಿಗೆ ತತ್ತರಿಸಿ 6 ವಿಕೆಟ್ ನಷ್ಟಕ್ಕೆ ಕೇವಲ 159 ರನ್ ಗಳಿಸಲಷ್ಟೇ ಶಕ್ತವಾಯಿತು.
ವಾಷಿಂಗ್ ಟನ್ ಸುಂದರ್ 3 ವಿಕೆಟ್, ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಚಹಾಲ್ ತಲಾ 1 ವಿಕೆಟ್ ಪಡೆದು ಬಾಂಗ್ಲಾವನ್ನು ಕಟ್ಟಿಹಾಕಿದರು.

- Advertisement -spot_img

More articles

- Advertisement -spot_img

Latest article