ಬದು”ಕಾಟ”ದ ನೋಟ

0
2815

ಬದುಕೆಂಬ ಹೆಸರೇ ಕೆಸರು
ಉಸಿರಾಟದ ಬಸಿರಲ್ಲಿ
ಜಗದ ಜಾತ್ರೆಗೆ ಜಾರಿ
ಜೀವನದ ಜಂಜಾಟದ
ಜೋಳಿಗೆಯ ಹಿಡಿದು
ನಿಲ್ಲದೋಟವ ಬಾಚಿ ತಬ್ಬಿ
ಯೋಚನೆಯಲೇ ಯೋಜನೆಯ ರೂಪಿಸಿ
ವಿವೇಚನೆಯ ತಡೆಗೋಡೆಗೆ
ಕಾಮ-ಕ್ರೋಧಗಳ ತೂಗಿಹಾಕಿ
ಉರುಳು ಕೊರಳ ಸುತ್ತಿದಾಗಲೂ
ನಗುವ ಅಲೆಯು ಕನ್ನಡಿಯಲೇ ತೇಲಿ
ತನ್ನದೆಯ ಒಂಟಿ ನೋವ
ಸೋಸಿ ತೆಗೆಯುವ ಹೊತ್ತಿಗೆ
ಈ ಜಗದ ಗುತ್ತಿಗೆ ಮುಗಿಯುವುದು
ಹೊಸಚಿಗುರು ಅರಳುವುದು
ಮತ್ತೆ ಮತ್ತೆ ಬದುಕಿನ ಆಟದಲೇ
ಮುಳುಗುವುದು ಕಾವ್ಯದತ್ತ.?

?ದತ್ತರಾಜ್ ಪಡುಕೋಣೆ?

LEAVE A REPLY

Please enter your comment!
Please enter your name here