1. ಕೇಜ್ರಿವಾಲ್ ಕಚೇರಿ ಮೇಲೆ ಸಿಬಿಐ ದಾಳಿ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಚೇರಿಯ ಮೇಲೆ ಸಿಬಿಐ ದಾಳಿ ಮಾಡಿರುವ ಕುರಿತು ಸ್ವತಃ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ..! ಆದರೆ ಕೇಜ್ರಿವಾಲ್ರ ಹೇಳಿಕೆಯನ್ನು ಸಿಬಿಐ ತಳ್ಳಿಹಾಕಿದೆ..!
ಗುತ್ತಿಗೆ ಆಧಾರಿತ ನೌಕರರ ನೇಮಕಾತಿ ಅವ್ಯವಹಾರದ ಹಿನ್ನೆಲೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ಕಚೇರಿ ಮೇಲೆ ದಾಳಿ ಮಾಡಿದ ಸಿಬಿಐ ಅಂದಾಜು 2 ಗಂಟೆಗಳ ಕಾಲ ಪರಿಶೀಲನೆ ನಡೆಸಿ ಅನೇಕ ದಾಖಲೆಗಳನ್ನು ವಶಪಡಿಸಿಕೊಂಡು ಅವರ ಕಚೇರಿಗೆ ಬೀಗಹಾಕಿದೆ..! ಮುಖ್ಯಮಂತ್ರಿಗಳ ಕಚೇರಿ ಕಟ್ಟಡದಲ್ಲಿಯೇ ಪ್ರಧಾನ ಕಾರ್ಯದರ್ಶಿಯರ ಕಚೇರಿಯೂ ಇದೆ ಎಂದು ಸಿಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ..!
ಆದರೆ ಕೆಂಡಮಂಡಲವಾಗಿರೋ ದಿಲ್ಲಿ ಮುಖ್ಯಮಂತ್ರಿಗಳು ಸಿಬಿಐ ನನ್ನ ಕಚೇರಿ ಮೇಲೆ ದಾಳಿ ಮಾಡಿದೆ ಎಂದು ಟ್ವೀಟ್ ಮಾಡಿದ್ದಲ್ಲದೇ ಮೋದಿಯವರನ್ನು ಹೇಡಿ, ಸೈಕೋಪಾತ್ ಎಂದೂ ಕೂಡ ಟ್ವೀಟ್ ಮೂಲಕ ಜರಿದಿದ್ದಾರೆ..!
2. ಹಿಂದೂ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮುಂದಾಗಿದೆ ಪಾಕ್..!
ಪುರಾತನ ಹಿಂದೂ ದೇವಾಲಯಗಳಿಗೆ ಯಾತ್ರಾರ್ಥಿಗಳನ್ನು ಆಕರ್ಷಿವುದಕ್ಕಾಗಿ ಪಾಕಿಸ್ತಾನ ಸರ್ಕಾರ ಅಲ್ಲಿನ ಹಿಂದೂ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮುಂದಾಗಿದೆ..!
3 ಕಬ್ಬನ್ ಪಾರ್ಕ್ ನಲ್ಲಿ ಪಾರ್ಕಿಂಗ್ ದುಬಾರಿ..!
ಕಬ್ಬನ್ ಪಾರ್ಕ್ ನಲ್ಲಿ ಪಾರ್ಕಿಂಗ್ ಸಿಕ್ಕಾಪಟೆ ದುಬಾರಿಯಾಗಲಿದೆ. ಪಾರ್ಕ್ ನಿರ್ವಹಣೆಯನ್ನು ಮಾಡುತ್ತಿರುವ ತೋಟಗಾರಿಕಾ ಇಲಾಖೆ ಪಾರ್ಕಿಂಗ್ ಶುಲ್ಕದ ಪರಿಷ್ಕರಣೆಯನ್ನು ಮಾಡಿದ್ದು, ಪ್ರಸ್ತುತ ಶುಲ್ಕಕ್ಕಿಂತ ಭಾರಿ ಪ್ರಮಾಣದಲ್ಲಿ ಪಾರ್ಕಿಂಗ್ ಶುಲ್ಕವನ್ನು ವಿಧಿಸಲು ಮುಂದಾಗಿದೆ..! ಪ್ರಸ್ತುತ ಇಡೀ ದಿನಕ್ಕೆ ದ್ವಿಚಕ್ರವಾಹನದ ಪಾರ್ಕಿಂಗ್ ಚಾರ್ಜ್ 10 ರೂ ಹಾಗೂ ಫೋರ್ ವೀಲರ್ ಪಾರ್ಕಿಂಗ್ ಚಾರ್ಜ್ 20 ರೂಪಾಯಿಗಳಾಗಿದೆ. ಆದರೆ ಪರಿಷ್ಕೃತ ನಿಯಮದ ಪ್ರಕಾರ ದ್ವಿಚಕ್ರವಾಹನದ ಪಾರ್ಕಿಂಗ್ ಗೆ ದಿನಕ್ಕೆ 95 ರೂಪಾಯಿಗಳನ್ನು, ಫೋರ್ ವೀಲರ್ಗೆ 125 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ..! ಕಬ್ಬನ್ ಪಾರ್ಕ್ ನಲ್ಲಿ ಪಾರ್ಕಿಂಗ್ ಮಾಡ್ಬೇಕು ಅಂತಾದ್ರೆ ಇಷ್ಟೊಂದು ದೊಡ್ಡ ಮೊತ್ತದ ಶುಲ್ಕವನ್ನು ಪಾವತಿಸಲೇ ಬೇಕಾಗುತ್ತೆ..! ನಿಯಮ ಯಾವಗಾ ಜಾರಿಗೆ ಬರುತ್ತೋ..?!
4. ವಿಧಾನಸಭೆಯಲ್ಲಿ ನೋಡ್ಬರ್ದನ್ನ ನೋಡಿದ ಕೈ ಶಾಸಕ ಸಸ್ಪೆಂಡ್..!
ವಿಧಾನಸಭೆಯಲ್ಲಿ ನೋಡ್ಬರ್ದನ್ನ ನೋಡ್ತಾ ಇದ್ದ ಶಾಸಕರೊಬ್ಬರು ಸಸ್ಪೆಂಡ್ ಆಗಿದ್ದಾರೆ. ವಿಧಾನಸಭೆಯೊಳಗೆ ಮೊಬೈಲಿನಲ್ಲಿ ಅಶ್ಲೀಲ ವೀಡಿಯೋ ವೀಕ್ಷಣೆಯಲ್ಲಿ ತಲ್ಲೀನರಾಗಿದ್ದ ಕಾಂಗ್ರೇಸ್ ಶಾಸಕ ನವ ಕಿಶೋರ್ ದಾಸರನ್ನು ಒರಿಸ್ಸಾ ಅಸೆಂಬ್ಲಿಯ ಸ್ಪೀಪರ್ ನಿರಂಜನ ಪೂಜಾರಿ 7 ದಿನಗಳ ಕಾಲ ಅಮಾನತು ಮಾಡಿದ್ದಾರೆ..!
ಹಿಂದೆ ನಮ್ಮ ರಾಜ್ಯದ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಕಲಾಪದ ಸಮಯದಲ್ಲಿ ನೀಲಿಚಿತ್ರ ವೀಕ್ಷಿಸಿದ್ದ ಪ್ರಕಣವೊಂದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ತನಿಖೆ ನಂತರ ಶಾಸಕರು `ಆ’ ವೀಡಿಯೋ ನೋಡಿಲ್ಲ ಅನ್ನೋದು ತಿಳಿದು ಅವರಿಗೆ ಕ್ಲೀನ್ಚಿಟ್ ನೀಡಿದ್ದನ್ನಿಲ್ಲಿ ಸ್ಮರಿಸಿಕೊಳ್ಳ ಬಹದು..!
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತನ ನಿವಾಸದ ಮೇಲೆ ಐಟಿ ರೈಡ್
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಕಾಂಗ್ರೆಸ್ ನಾಯಕ ಪಿ. ರಮೇಶ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಇಂದು ದಾಳಿ ನಡೆಸುವ ಮೂಲಕ ಮುಖ್ಯಮಂತ್ರಿಗಳಿಗೆ ಶಾಕ್ ನೀಡಿದ್ದಾರೆ..!
ಸಿಎಂ ಅವರ ಮಗ ರಾಕೇಶ್ ಅವರ ಪರಮಾಪ್ತರಾಗಿರೋ ರಮೇಶ್ರ ಜೋಗುಪಾಳ್ಯದ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದಲ್ಲದೆ 3 ಲಕ್ಷ ರೂ ಮೌಲ್ಯದ ಕರೆನ್ಸಿಯನ್ನು ಜಪ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ.! ದೆಹಲಿ ಮತ್ತು ಕೋಲ್ಕತ್ತಾದಿಂದ ಆಗಮಿಸಿದ್ದ 45ಕ್ಕೂ ಹೆಚ್ಚು ಅಧಿಕಾರಿಗಳು ಇನ್ನೂ ಕೆಲವರ ನಿವಾಸದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ..!
6. ಪುಣೆ ತೆಕ್ಕೆಗೆ ಧೋನಿ, ರಾಜ್ ಕೋಟ್ಗೆ ರೈನಾ
ಐಪಿಎಲ್ನ ಎರಡು ಹೊಸ ತಂಡಗಳಾದ ಪುಣೆ ಮತ್ತು ರಾಜ್ ಕೋಟ್ ತಂಡಗಳು ಆಟಗಾರರನ್ನು ಖರೀದಿಸಿದ್ದು ಕ್ಯಾಪ್ಟರ್ ಕೂಲ್ ಮಾಹಿ ಅಲಿಯಾಸ್ ಮಹೇಂದ್ರ ಸಿಂಗ್ ಧೋನಿ ಪುಣೆ ತಂಡದ ತೆಕ್ಕೆಗೆ ಬಿದ್ದಿದ್ದಾರೆ. ಅದೇರೀತಿ ಇನ್ನೊಬ್ಬ ಸ್ಟಾರ್ ಆಟಗಾರ, ಸುರೇಶ್ ರೈನಾ ರಾಜ್ ಕೋಟ್ ತಂಡವನ್ನು ಸೇರಿದ್ದಾರೆ..!
ಯಾರ್ಯಾರು ಎಲ್ಲೆಲ್ಲಿಗೆ…? ಯಾರ್ಯಾರಿಗೆ ಎಷ್ಟೆಷ್ಟು ಹಣ..?
ಪುಣೆ ತಂಡ
ಧೋನಿ (12.5 ಕೋಟಿ)
ಅಂಜಿಕ್ಯ ರಹಾನೆ (9.5ಕೋಟಿ)
ಆರ್ ಅಶ್ವಿನ್ ( 7.5 ಕೋಟಿ)
ಸ್ಟಿವನ್ ಸ್ಮಿತ್ (5.5ಕೋಟಿ)
ಡು ಪ್ಲೆಸಿಸ್ (4ಕೋಟಿ)
ರಾಜ್ ಕೋಟ್ ತಂಡ
ಸುರೇಶ್ ರೈನಾ (12.5ಕೋಟಿ)
ರವೀಂದ್ರ ಜಡೇಜಾ(9.5ಕೋಟಿ)
ಬ್ರೆಂಡಮ್ ಮೆಕಲಮ್ (7.5ಕೋಟಿ)
ಜೇಮ್ಸ್ ಫಾಕ್ನರ್ (5.5ಕೋಟಿ)
ಡ್ವೆಯ್ನ ಬ್ರಾವೋ (4ಕೋಟಿ)
ಈ ಬಿಡ್ನಲ್ಲಿ ಐದು ಆಟಗಾರರನ್ನು ಮಾತ್ರ ಬಿಡ್ ಮಾಡುವ ಅವಕಾಶ ಇತ್ತು. ಇನ್ನುಳಿದ ಆಟಗಾರರನ್ನು ಇತರೆ ತಂಡಗಳ ಜೊತೆ ಫೆಬ್ರವರಿಯಲ್ಲಿ ಬಿಡ್ ಮಾಡುತ್ತಾರೆ.
7. ರಾಜ್ಯದಲ್ಲಿ ಹೊಸ ವರ್ಷದಿಂದ 50-80 ಶೇಕಡ ರಿಯಾತಿ ದರದಲ್ಲಿ ಔಷಧ ಮಾರಾಟ..!
ದುಬಾರಿ ಬೆಲೆಯನ್ನು ನೀಡಿ ಔಷಧ ಕೊಳ್ಳಲು ಅನೇಕರಿಕೆ ಸಾಧ್ಯವಾಗುತ್ತಿಲ್ಲದೇ ಇರುವುದರಿಂದ,ರಿಯಾಯಿತಿ ದರದಲ್ಲಿ ಔಷಧಿ ನೀಡುವ `ಸಂಜೀವಿನಿ’ ಯೋಜನೆ ಹೊಸ ವರ್ಷದಿಂದ ಆರಂಭವಾಗುತ್ತದೆಂದು ವಿಕಾಸ ಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
8. ಮುಂದಿನ ತಿಂಗಳು ಸ್ವಿಜರ್ಲ್ಯಾಂಡಿನಲ್ಲಿ ಮೋದಿ-ಷರೀಫ್ ಭೇಟಿ..?
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಮುಂದಿನ ತಿಂಗಳು ಸ್ವಿಜರ್ಲ್ಯಾಂಡಿನಲ್ಲಿ ಭೇಟಿ ಆಗುವ ಸಾಧ್ಯತೆ ಇದೆ.
ವರ್ಲ್ಡ್ ಎಕನಾಮಿಕ್ ಪೋರಂನ 46ನೇ ವಾರ್ಷಿಕ ಸಭೆ ದಾವೋದ್ ಕ್ಲೋಸ್ಟರ್ ನಲ್ಲಿ ನಡೆಯಲಿದ್ದು ಉಬಯ ರಾಷ್ಟ್ರಗಳ ಪ್ರಧಾನಿಗಳು ಅಲ್ಲಿ ಪರಸ್ಪರ ಭೇಟಿ ಆಗುವ ಸಾಧ್ಯತೆ ಇದೆ.
9. ಪೆಟ್ರೋಲ್, ಡಿಸೇಲ್ ಬೆಲೆ ಲೀಟರ್ಗೆ 25 ರೂ ಇಳಿಕೆಗೆ ಸಿಪಿಎಂ ಒತ್ತಾಯ
ಪ್ರವಾಹ ಪೀಡಿತ ತಮಿಳುನಾಡಿನಲ್ಲಿ ಪೆಟ್ರೋಲ್,ಡಿಸೇಲ್ ಬೆಲೆಯನ್ನು ಪ್ರತಿ ಲೀಟರ್ಗೆ 25 ರೂಗಳಷ್ಟು ಇಳಿಸಬೇಕು ಹಾಗೂ ಇನ್ನೂ ಹೆಚ್ಚಿನ ಆರ್ಥಿಕ ನೆರವನ್ನು ನೀಡಬೇಕೆಂದು ಸಿಪಿಎಂ ಇವತ್ತು ಲೋಕಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಿದೆ
ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಗಣನೀಯವಾಗಿ ಬ್ಯಾರಲ್ಗೆ 35ರಷ್ಟು ಕುಸಿದಿರುವಾಗ ನೆರೆ ಪೀಡಿತ ತಮಿಳುನಾಡಿನಲ್ಲಿ 25 ರೂನಷಟ್ಟು ಇಳಿಸಲು ಕಷ್ಟವೇನೆಂದು ಸಿಪಿಎಂ ಸದಸ್ಯ ಎಂಬಿ ರಾಜೇಶ್ ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಚೆನ್ನೈನಲ್ಲಿ 50,000 ಹೊಸ ಮನೆ ನಿರ್ಮಿಸಲು ಕೇಂದ್ರ ಸರ್ಕಾರ ಐದು ಸಾವಿರ ಕೋಟಿ ನೆರವನ್ನು ನೀಡಬೇಕೆಂದು ಎಐಡಿಎಂಕೆ ಸದಸ್ಯ ಪಿ ನಾಗರಾಜನ್ ಒತ್ತಾಯಿಸಿದರು.
10. `ಪರಪಂಚ’ದಲ್ಲಿ ಹುಚ್ಚ ವೆಂಕಟ್ ಹಾಡು..!
ದಿಗಂತ್ ಮತ್ತು ರಾಗಿಣಿ ಅಭಿನಯದ `ಪರಪಂಚ` ಸಿನಿಮಾಕ್ಕೆ ಹುಚ್ಚವೆಂಕಟ್ ಅವರು ಹಾಡೊಂದನ್ನು ಹೇಳಿದ್ದಾರೆ. ಅಷ್ಟೇ ಅಲ್ಲ ಅವರು ಹೇಳಿರೋ ಹಾಡಿನಲ್ಲಿ ಅವರೇ ಕಾಣಿಸಿಕೊಳ್ಳುತ್ತಿರೋದು ಕೂಡ ವಿಶೇಷವಾಗಿದೆ.
ಮಾನವ ಜೀವನದ ಕುರಿತಾದ ಈ ಫಿಲಾಸಫಿಕಲ್ ಹಾಡನ್ನು ವೆಂಕಟ್ ಅವರೇ ಹಾಡಿದರೆ ಚೆನ್ನ ಎಂದು ಚಿತ್ರ ತಂಡ ಈ ಹಾಡನ್ನು ಅವರಿಂದ ಹಾಡಿಸಿದ್ದಾರೆ.