ಚಿತ್ರೀಕರಣದ ವೇಳೆ ನಟಿ ಆಲಿಯಾ ಭಟ್ ಗಾಯಗೊಂಡಿದ್ದಾರೆ. ಇತ್ತಿಚೆಗಷ್ಟೇ ತಮ್ಮ 25ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರು ಇವರು ‘ಬ್ರಹ್ಮಾಸ್ತೃ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಬಲ್ಗೇರಿಯಾದಲ್ಲಿ ಚಿತ್ರೀಕರಣ ನಡೀತಿದೆ. ಆ್ಯಕ್ಷನ್ ಸೀನ್ ಶೂಟಿಂಗ್ ಸಂದರ್ಭದಲ್ಲಿ ಆಲಿಯಾ ಗಾಯಗೊಂಡಿದ್ದಾರೆ. ಅವರ ಬಲಭುಜ ಹಾಗೂ ತೋಳಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಬ್ರಹ್ಮಾಸ್ತ್ರ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರಣಬೀರ್ ಕಪೂರ್ , ಆಯನ್ ಮುಖರ್ಜಿ ಅಭಿನಯಿಸುತ್ತಿದ್ದಾರೆ.