ಯೋಧರು ದೇಶದ ಹೆಮ್ಮೆ. ದೇಶಕ್ಕಾಗಿ, ದೇಶವಾಸಿಗಳಿಗಾಗಿ ತಮ್ಮ ಜೀವ ಮತ್ತು ಜೀವನವನ್ನು ಮುಡಿಪಾಗಿಡುವ ಹೆಮ್ಮೆಯ ಸೈನಿಕರು ಎಲ್ಲರಿಗಿಂತಲೂ ಗ್ರೇಟ್.
ದೇಶಕ್ಕಾಗಿ ಹೋರಾಡುವ ಸೈನಿಕರ ಗುಂಡಿಗೆ ಸಿಕ್ಕಾಪಟ್ಟೆ ಗಟ್ಟಿ. ಸಾವನ್ನೇ ಗೆಲ್ಲಿವ, ಯಮನನ್ನೇ ಕೊಂದು ಬಿಡುವ ಶಕ್ತಿ ನಮ್ಮ ಯೋಧರದ್ದು.
ಹೌದು, ನಮ್ಮ ವೀರ ಯೋಧರೊಬ್ಬರು ಯಮನನ್ನೇ ಸೋಲಿಸಿ, ಸಾವನ್ನು ಗೆದ್ದು ಮತ್ತೆ ದೇಶಸೇವೆಗೆ ರೆಡಿಯಾಗಿದ್ದಾರೆ…!
ಜಮ್ಮು ಕಾಶ್ಮೀರದ ಬಂಡೀಪೋರ್ ಎನ್ ಕೌಂಟರ್ ವೇಳೆ ಒಂಭತ್ತು ಗುಂಡುಗಳು ತಾಗಿ ಕೋಮಾ ಸ್ಥಿತಿಗೆ ಜಾರಿದ್ದ ಸಿಆರ್ಪಿಎಫ್ ಕಮಾಂಡರ್ ಚೇತನ್ ಚೀತಾ ಸಾವನ್ನು ಗೆದ್ದು ದೇಶಸೇವೆಗೆ ಹಾಜರಾಗಿರುವವರು.
ಕಳೆದ ವರ್ಷ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರ ಬಂಡಿಪೋರ್ ದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಚರಣೆ ವೇಳೆ 45ವರ್ಷದ ಚೇತನ್ ಅವರ ಎದೆಗೆ 9ಗುಂಡುಗಳು ಹೊಕ್ಕಿದ್ದವು.
ಮೆದುಳು, ಹೊಟ್ಟೆ, ಕೈ, ಬಲಗಣ್ಣು ಮತ್ತು ತೊಡೆಯಲ್ಲಿ ಗುಂಡು ಹೊಕ್ಕಿತ್ತು. ಪ್ರಜ್ಞೆ ಕಳೆದುಕೊಂಡ ಅವರು ಕೋಮಾ ಸ್ಥಿತಿ ತಲುಪಿದ್ದರು. 2ತಿಂಗಳ ಬಳಿಕ ಕೋಮಾದಿಂದ ಹೊರಬಂದಿದ್ದರು.
ದೆಹಲಿಯ ಏಮ್ಸ್ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೇತನ್ ಕಳೆದ ವರ್ಷ ಏಪ್ರಿಲ್ 5ಕ್ಕೆ ಡಿಸ್ಚಾರ್ಜ್ ಆಗಿದ್ದರು. ಈಗ ಪುನಃ ಸೇವೆಗೆ ವಾಪಸ್ಸಾಗಿದ್ದಾರೆ.