ಬ್ರಾಹ್ಮಣರಿಗೂ ಪ್ರತ್ಯೇಕ ಧರ್ಮ ಕೊಟ್ರೆ ತಪ್ಪೇನು ಇಲ್ಲ ಅಂತ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಬ್ರಾಹ್ಮಣರು ಹಿಂದೂ ಧರ್ಮದಿಂದ ಹೇಗೆ ಭಿನ್ನ ಎಂಬುದನ್ನು ಸಾಬೀತುಪಡಿಸಿದರೆ ಅವರಿಗೂ ಪ್ರತ್ಯೇಕ ಧರ್ಮ ಕೊಡಬಹುದು ಎಂದು ಹೇಳಿದ್ದಾರೆ.
ಬ್ರಾಹ್ಮಣರು ಸರ್ಕಾರಕ್ಕೆ ದಾಖಲಾತಿ ಸಲ್ಲಿಸಿ ತಾವೂ ಹಿಂದೂಗಳಿಗಿಂತ ಭಿನ್ನ ಎಂದು ಸಾಬೀತು ಮಾಡಲಿ. ನಾವು ಲಿಂಗಾಯತರು ಪ್ರತ್ಯೇಕ ಅಂತಾ ಸಾಬೀತು ಮಾಡಿದ್ದೇವೆ. ಕೇಂದ್ರ ಸರ್ಕಾರದ ಶೇ.99ರಷ್ಟು ಒಪ್ಪಿಗೆ ಸೂಚಿಸುತ್ತೆ ಎಂಬ ನಂಬಿಕೆ ನಮಗಿದೆ. ಒಂದು ವೇಳೆ ಒಪ್ಪಿಗೆ ನೀಡದೇ ಇದ್ದರೆ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.