ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರ ಸೆಟ್ಟೇರಿದೆ. ಏಪ್ರಿಲ್ ಮೊದಲವಾರದಿಂದ ಚಿತ್ರೀಕರಣ ನಡೆಯುತ್ತೆ.
ಸುದೀಪ್ ಅವರ ಹುಟ್ಟುಹಬ್ಬದಂದು ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಸುದೀಪ್ ಬಾಕ್ಸರ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಗೆಟಪ್ ಸಖತ್ ಸುದ್ದಿ ಮಾಡಿತ್ತು. ಸುದೀಪ್ ಅಭಿಮಾನಿಗಳು ಪೈಲ್ವಾನ್ ಸುದೀಪ್ ಅವರಂತೆ ಪೋಸ್ ನೀಡಿ ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸಿದ್ದರು.
ಕಿಚ್ಚನ ಅಭಿಮಾನಿಯೊಬ್ಬರು ತಮ್ಮ ಪುಟ್ಟು ಗಂಡುಮಗುವಿಗೆ ಪೈಲ್ವಾನ್ ಲುಕ್ ನೀಡಿ ಫೋಟೋ ಕ್ಲಿಕ್ಕಿಸಿ ಸುದೀಪ್ ಟ್ವೀಟರ್ ಗೆ ಟ್ಯಾಗ್ ಮಾಡಿದ್ದಾರೆ.
ಇದನ್ನು ನೋಡಿದ ಸುದೀಪ್ ಈ ಮಗುವಿನ ಕ್ಯೂಟ್ ನೆಸ್ ಎದುರಲ್ಲಿ ನಾ ಸ್ಪರ್ಧಿಯಲ್ಲ ಎಂದು ಟ್ವೀಟ್ ಮಾಡಿದ್ದಾರೆ.
He looks more aggressive,,
N surely I’m no competition to his cuteness. https://t.co/uydT9bPSTQ— Kichcha Sudeepa (@KicchaSudeep) March 21, 2018