ತಾಯಿಯೊಬ್ಬರು ತನ್ನ ಮಗುವನ್ನು ಮಡಿಲಿನಲ್ಲಿ ಮಲಗಿಸಿಕೊಂಡು ಹಾಲುಣಿಸುತ್ತಾ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಫ್ಘಾನಿಸ್ತಾನದ ಡೇಕುಂಡಿ ಪ್ರಾಂತ್ಯದಲ್ಲಿನ ಖಾಸಗಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ 25ವರ್ಷದ ಮಹಿಳೆ ಜಹಾನ್ ತಾಬ್ ಮಗುವನ್ನು ಮಡಿಲಿನಲ್ಲಿ ಮಲಗಿಸಿಕೊಂಡು ಪರೀಕ್ಷೆ ಬರೆದವರು.
ಜಹಾನ್ ನಾಸಿರ್ಖಸ್ರಾ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಮಾಜ ವಿಜ್ಞಾನ ಕೋರ್ಸ್ ಪ್ರವೇಶ ಪಡೆಯಲು ಕಾನ್ಕೋರ್ ಎಕ್ಸಾಂ ಎಂಬ ಪ್ರವೇಶ ಪರೀಕ್ಷೆ ಬರೆಯುವಾಗ ತನ್ನ 2ತಿಂಗಳ ಮಗುವು ಅಳಲಾರಂಭಿಸಿತು.
ಆಗ ಅದನ್ನು ಸಮಾಧಾನಪಡಿಸಲಾಗಿದೆ ಅನುಮತಿ ಪಡೆದು ಹಾಲುಣಿಸುತ್ತಲೇ ಎಕ್ಸಾಮ್ ಬರೆದ್ರು.
ಮಗು ಅಳಲಾರಂಭಿಸಿದಾಗ ಮಹಿಳೆ ಡೆಸ್ಕ್ ನಿಂದ ಎದ್ದು ನೆಲದ ಮೇಲೆ ಕುಳಿತುಕೊಂಡು ಹಾಲುಣಿಸುತ್ತಾ ಪರೀಕ್ಷೆ ಬರೆದರು ಎಂದು ಪ್ರಾದ್ಯಾಪಕ ಇರ್ಫಾನ್ ಫೋಟೋದೊಂದಿಗೆ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯ ಫೋಟೋ ಒಂದೊಳ್ಳೆ ಸಂದೇಶ ನೀಡುತ್ತಿದ್ದು ಪ್ರಶಂಸೆ ವ್ಯಕ್ತವಾಗಿದೆ.
پیشنهاد خوبی است
Posted by Yahya Erfan on Monday, March 19, 2018