1. ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಿದೆ, ಮದ್ಯದಂಗಡಿ ಹೆಚ್ಚಿಸಬೇಕಿದೆ: ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಸಾರಾಯಿ ಮಾರಾಟದ ನಿಷೇಧದಿಂದ ಕುಡಿಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಅಲ್ಲದೇ, ಅಕ್ರಮ ಮದ್ಯ ಸರಬರಾಜಿನ ಪ್ರಕರಣಗಳು ಹೆಚ್ಚಾಗಿವೆ. ಕಳೆದ 23 ವರ್ಷಗಳಿಂದ ಹೊಸ ಮದ್ಯದಂಗಡಿ, ಬಾರ್ಗಳಿಗೆ ಲೈಸೆನ್ಸ್ ನೀಡಿಲ್ಲ. ಇದರಿಂದ ಅಕ್ರಮಗಳನ್ನು ತಡೆಗಟ್ಟಲು ಹೊಸ ಲೈಸೆನ್ಸ್ ನೀಡಲು ಸರ್ಕಾರ ಚಿಂತನೆ ನಡೆಸಿದೆಯೇ ವಿನಃ ಎಲ್ಲಿಯೂ ಲೈಸೆನ್ಸ್ ಕೊಡುತ್ತೇವೆ ಎಂದು ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
2. ಮಹಾವಂಚಕಿ ವಿಶಾಲಾಕ್ಷಿ ಭಟ್ ದೆಹಲಿಯಲ್ಲಿ ಸೆರೆ
ಜೀವ ವಿಮೆ ಹಾಗೂ ಷೇರು ಬಂಡಾವಳ ಹೆಸರಿನಲ್ಲಿ ಚಿತ್ರನಟರು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಉದ್ಯಮಿಗಳಿಗೆ 34 ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚಿಸಿ ಪರಾರಿಯಾಗಿದ್ದ ಎಚ್ಡಿಎಫ್ ಸಿ ಜೀವ ವಿಮಾ ಕಂಪನಿಯ ವ್ಯವಸ್ಥಾಪಕಿ ವಿಶಾಲಾಕ್ಷಿ ಭಟ್ ಳನ್ನು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ದೆಹಲಿಯಲ್ಲಿ ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಜೆ.ಪಿ.ನಗರದ ನಿವಾಸಿ ವಿಶಾಲಾಕ್ಷಿ ಅವರು, ಕೆಲ ಉದ್ಯಮಿಗಳಿಗೆ ಜೀವ ವಿಮೆ ಹಾಗೂ ಷೇರು ಬಂಡಾವಳ ಹೂಡಿಕೆಯಲ್ಲಿ ಬ್ಯಾಂಕ್ ಗಳಿಂದ ಆಥರ್ಿಕ ನೆರವು ಕಲ್ಪಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ಹಣ ಪಡೆದು ಪರಾರಿಯಾಗಿದ್ದರು.
3. ಸ್ವಿಸ್ ಖಾತೆ ಬಹಿರಂಗ: ಪಟ್ಟಿಯಲ್ಲಿ 4 ಭಾರತೀಯರ ಹೆಸರು
ಸ್ವಿಟ್ಜಲರ್ೆಂಡ್ ಡ್ರಾ ಮಾಡದೆ ಇರುವ 60 ವರ್ಷಗಳಿಗಿಂತ ಹಳೆಯ 2,600 ಖಾತೆಗಳ ವಿವರಗಳನ್ನು ಬುಧವಾರ ಬಹಿರಂಗ ಪಡಿಸಿದೆ. ಇದರಲ್ಲಿ ಭಾರತೀಯರ ನಾಲ್ಕು ಖಾತೆಗಳಿವೆ. ಈ 2,600 ಖಾತೆಗಳಲ್ಲಿ 300 ಕೋಟಿ ರೂಪಾಯಿ ಠೇವಣಿಗಳಿವೆ. ಆದರೆ ನಿರ್ದಿಷ್ಟವಾಗಿ ಇಂತಹ ಖಾತೆಯಲ್ಲಿ ಇಷ್ಟು ಹಣವಿದೆ ಎಂಬ ವಿವರಗಳನ್ನು ತಿಳಿಸಿಲ್ಲ. ಪಿಯರಿ ವಾಚೆಕ್ ಎಂಬ ಹೆಸರಿನ ಖಾತೆಯ ವಿಳಾಸ ಬಾಂಬೆ ಎಂದಿದೆ. ಉಳಿದಂತೆ ಡೆಹ್ರಾಡನ್ನ ಬಹಾದೂರ್ ಚಂದ್ರ ಸಿಂಗ್, ಪ್ಯಾರಿಸ್ನಲ್ಲಿನ ವಿಳಾಸದಲ್ಲಿ ಡಾ. ಮೋಹನ್ ಲಾಲ್ ಎಂಬುವರು ಹಾಗೂ ಕಿಶೋರ್ ಲಾಲ್ ಎಂಬುವರು ಖಾತೆಗಳನ್ನು ಹೊಂದಿದ್ದಾರೆ. ಈ ಖಾತೆಗಳಲ್ಲಿರುವ ಹಣವನ್ನು ಪಡೆಯಲು ಬಯಸುವ ಮಕ್ಕಳು ಅಥವಾ ಸಂಬಂಧಿಕರು ಐದು ವರ್ಷಗಳೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡೆಯಬಹುದು ಎಂದು ಸ್ವಿಸ್ ಬ್ಯಾಂಕರ್ಸ್ ಒಕ್ಕೂಟ ತಿಳಿಸಿದೆ.
4. ಜಾಮೀನು ಕೋರದಿರಲು ಸೋನಿಯಾ, ರಾಹುಲ್ ನಿರ್ಧಾರ
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 19ರಂದು ನ್ಯಾಯಾಲಯಕ್ಕೆ ಹಾಜರಾಗುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಜಾಮೀನು ಕೋರಿ ಅಜರ್ಿ ಸಲ್ಲಿಸದಿರಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರಕರಣ ಸಂಬಂಧ ಶನಿವಾರ ಕೋರ್ಟ್ ಗೆ ಹಾಜರಾಗುತ್ತಿರುವ ಸೋನಿಯಾ ಹಾಗೂ ರಾಹುಲ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಬದಲು, ತಾವು ನಿರಪರಾಧಿಗಳು ಎಂದು ಸಾಬೀತುಪಡಿಸಲು ಜೈಲಿಗೆ ಹೋಗಲು ಸಿದ್ಧ ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
5. ಚೆನ್ನೈನಲ್ಲಿರುವ ಚಿದಂಬರಂ ಕಚೇರಿ ಮೇಲೆ ದಾಳಿ
ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರ ಚೆನ್ನೈ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಕಾತರ್ಿ ಚಿದಂಬರಂ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗಿರುವ ವಾಸನ್ ಹೆಲ್ತ್ಕೇರ್ ಮತ್ತು ಅಡ್ವಾಂಟೇಜ್ ಸ್ಟ್ರ್ಯಾಟಜಿಕ್ ಕನ್ಸಲ್ಟಿಂಗ್ ಕಂಪೆನಿಗಳಲ್ಲಿ ನಡೆದಿರುವ ವಿದೇಶಿ ವಿನಿಮಯ ಅಕ್ರಮಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ.
6. ಡಿಡಿಡಿಸಿ ಭ್ರಷ್ಟಾಚಾರದಲ್ಲಿ ಜೇಟ್ಲಿ ಭಾಗಿ : ಆಪ್ ಆರೋಪ
ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಆರೋಪ ಮುಂದುವರೆಸಿರುವ ದೆಹಲಿ ಆಮ್ ಆದ್ಮಿ ಪಕ್ಷ, ಅರುಣ್ ಜೇಟ್ಲಿ ಡಿಡಿಸಿಎ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆಪ್ ನಾಯಕರು, ಅರುಣ್ ಜೇಟ್ಲಿ ಡಿಡಿಸಿಎ ಅಧ್ಯಕ್ಷರಾಗಿದ್ದಾಗ ಭ್ರಷ್ಟಾಚಾರ ನಡೆದಿದ್ದು ಅರುಣ್ ಜೇಟ್ಲಿ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು ಕೇಂದ್ರ ಸರ್ಕಾರ ಅರುಣ್ ಜೇಟ್ಲಿ ರಾಜೀನಾಮೆ ಪಡೆಯಬೇಕು ಎಂದು ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಆಗ್ರಹಿಸಿದ್ದಾರೆ.
7. ದಶಕದ ನಂತರ ಬಡ್ಡಿದರ ಹೆಚ್ಚಿಸಿದ ಫೆಡರಲ್ ರಿಸರ್ವ್
ಮಹತ್ವದ ಐತಿಹಾಸಿಕ ಕ್ರಮವೊಂದರಲ್ಲಿ ಸರಿಸುಮಾರು ದಶಕದ ನಂತರ ಅಮೆರಿಕದ ಫೆಡರಲ್ ರಿಸವರ್್ ಬಡ್ಡಿದರವನ್ನು 0.25 ಶೇಕಡಾದಷ್ಟು ಹೆಚ್ಚಿಸಿದ್ದು, ಜಾಗತಿಕ ಆಥರ್ಿಕ ಬಿಕ್ಕಟ್ಟಿನಿಂದ ವಿಶ್ವದ ಅತಿ ದೊಡ್ಡ ಆಥರ್ಿಕ ರಾಷ್ಟ್ರ ಹೊರಬರುವ ಸೂಚನೆ ನೀಡಿದೆ. ಅಮೆರಿಕದ ಕೇಂದ್ರ ಬ್ಯಾಂಕ್ ಆಗಿರುವ ಫೆಡರಲ್ ರಿಸವರ್್ ಹೆಚ್ಚಿಸಿರುವ ಬಡ್ಡಿ ದರವು ಮಾರುಕಟ್ಟೆಯ ಆರ್ಥಿಕ ಚೇತರಿಕೆಯನ್ನು ಸೂಚಿಸುತ್ತದೆ. 2006ರಿಂದ 2008ರವರೆಗೆ ಅಮೆರಿಕ ಎದುರಿಸಿದ್ದ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವ ಸೂಚನೆ ನೀಡಿದೆ.
8. ಪಾಕ್ ನಲ್ಲಿ ಮಸ್ತಾನಿಗೆ ರೆಡ್, ದಿಲ್ವಾಲೆಗೆ ಗ್ರೀನ್ ಸಿಗ್ನಲ್
ಬಾಲಿವುಡ್ ನ ಎರಡು ಬಹು ನಿರೀಕ್ಷಿತ ಚಿತ್ರಗಳಾದ ಬಾಜಿರಾವ್ ಮಸ್ತಾನಿ ಚಿತ್ರಕ್ಕೆ ಪಾಕಿಸ್ತಾನದಲ್ಲಿ ರೆಡ್ ಸಿಗ್ನಲ್ ಸಿಕ್ಕಿದರೆ, ರೋಹಿತ್ ಶೆಟ್ಟಿ ನಿರ್ದೇಶನದ ದಿಲ್ ವಾಲೆ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಬಾಜಿರಾವ್ ಸಿನಿಮಾದಲ್ಲಿ ಇಸ್ಲಾಂ ವಿರೋಧಿ ಅಂಶಗಳಿರುವುದರಿಂದ ಪಾಕಿಸ್ತಾನದಲ್ಲಿ ಬಿಡುಗಡೆಗೆ ನಿಷೇಧ ಹೇರಲಾಗಿದೆ ಎಂದು ಅಲ್ಲಿನ ಚಲನಚಿತ್ರ ಸೆನ್ಸಾರ್ ಮಂಡಳಿ ತಿಳಿಸಿದೆ. ಆದರೆ ಶಾರುಕ್ ಖಾನ್, ಕಾಜೋಲ್ ಅಭಿನಯದ ದಿಲ್ ವಾಲೆ ಬಿಡುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
9. ಶಂಕಿತ ಅಲ್ ಖೈದಾ ಉಗ್ರ ಉತ್ತರ ಪ್ರದೇಶದಲ್ಲಿ ಬಂಧನ
ಉತ್ತರ ಪ್ರದೇಶದ ಸಂಬಾಲ್ ಜಿಲ್ಲೆಯಲ್ಲಿ ಶಂಕಿತ ಅಲ್ ಖೈದಾ ಉಗ್ರಗಾಮಿಯನ್ನು ಬಂಧಿಸಲಾಗಿದೆ. ನಂತರ ಅವನನ್ನು ದೆಹಲಿಯ ಪಟಿಯಾಲ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕಳೆದ ಎರಡು ದಿನಗಳಲ್ಲಿ ಬಂಧಿತಗೊಂಡ ಮೂರನೇ ಉಗ್ರ ಈತನಾಗಿದ್ದಾನೆ.
10. ಒಂದು ಬಾಟಲ್ ಶುದ್ಧ ಗಾಳಿಗೆ ಕೇವಲ ರು.1850!
ಉಸಿರಾಡುವ ಗಾಳಿಯನ್ನೂ ದುಡ್ಡು ಕೊಟ್ಟು ಕೊಂಡುಕೊಳ್ಳುವುದಾ..? ಅಂಥ ದಿನ ಮುಂದೊಂದಿನ ಬರಬಹುದು ಎನ್ನುತ್ತೀರಾ..? ಉಹುಂ ಈಗಾಗಲೇ ಆ ದಿನ ಬಂದಿದೆ. ಚೀನಾದಲ್ಲಿ..! ಒಂದೆರಡು ದಿನಗಳಲ್ಲಿ ಸುಧಾರಿಸಬಹುದು ಎಂದುಕೊಂಡಿದ್ದ ಚೀನಾದ ವಾಯುಮಾಲಿನ್ಯ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಆದರೆ ಇದು ಯಾವ್ಯಾವುದೋ ವ್ಯಾಪಾರಗಳಿಗೆ ವರವಾಗಿ ಪರಿಣಮಿಸಿದೆ. ಇದೀಗ ಕೆನಡಾ ಕಂಪನಿಯೊಂದು ಈ ಸ್ಮಾಗ್ ಸಮಸ್ಯೆಯಿಂದ ಲಾಭ ಮಾಡಿಕೊಳ್ಳಲು ಹೊರಟಿದೆ. ಈ ಕಂಪನಿ ಬೆಟ್ಟದ ಮೇಲಿನ ತಾಜಾ ಗಾಳಿಯನ್ನು ತುಂಬಿಸಿದ ಬಾಟಲ್ ಗಳನ್ನು ಮಾರಲು ಆರಂಭಿಸಿದ್ದು, ಪ್ರತಿ ಬಾಟಲ್ ರು.1850ಕ್ಕೆ ಬಿಕರಿಯಾಗುತ್ತಿದೆ.