ಪ್ರೇಕ್ಷಕರನ್ನು ಕಚಡಾಗಳು ಎಂದಿದ್ದ ರಾಜರಥ ಸಿನಿಮಾ ನಿರ್ದೇಶಕ ಅನೂಪ್ ಬಂಡಾರಿ ಕನ್ನಡಿಗರ ಕ್ಷಮೆ ಕೇಳಿದ್ದಾರೆ.
ರ್ಯಾಪಿಡ್ ರಶ್ಮಿ ಶೋ ನಲ್ಲಿ ಭಾಗವಹಿಸಿದ್ದ ಅನೂಪ್ ಬಂಡಾರಿ, ನಾಯಕ ನಟ ನಿರೂಪ್ ಬಂಡಾರಿ ಹಾಗೂ ನಟಿ ಆವಂವತಿಕ ಶೆಟ್ಟಿ ತಮ್ಮ ರಾಜರಥ ಸಿನಿಮಾ ನೋಡದೇ ಇರುವವರು ಕಚಡಾಗಳು ಲೋಫರ್ ಗಳು ಎಂದಿದ್ದರು.

ರಾಜರಥ ಸಿನಿಮಾ ನೋಡದೇ ಇರೋರಿಗೆ ಏನೇಳೋಕೆ ಇಷ್ಟಪಡ್ತೀರಿ ಎಂದು ಆರ್ ಜೆ ರಶ್ಮಿ ಕೇಳಿದ ಪ್ರಶ್ನೆಗೆ ನಿರ್ದೇಶಕ ಅನೂಪ್ ಕಚಡಾ ನನ್ ಮಗ ಎಂದಿದ್ದರು. ಆವಂತಿಕ ಕೂಡ ಅದೇ ಉತ್ತರ ನೀಡಿದ್ದರು.ನಿರೂಪ್ ಕಚಡಾ ಲೋಫರ್ ನನ್ ಮಕ್ಳು ಅಂದಿದ್ದರು.
ಇದೀಗ ಅನೂಪ್ ಬಂಡಾರಿ ಫೇಸ್ ಬುಕ್ ಪೋಸ್ಟ್ ಮತ್ತು ವೀಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ. ಈ ಕಾರ್ಯಕ್ರಮ ನಡೆದಿದ್ದು ಆ ವೇಳೆ ಸಿನಿಮಾದ ಡೈಲಾಗ್ ಹೇಳಿದೆ. ಅದನ್ನೇ ನಿರೂಪ್ ಕೂಡ ರಿಪೀಟ್ ಮಾಡಿದ್ದರು ಎಂದು ಹೇಳಿದ್ದಾರೆ. ಉದ್ದೇಶ ಪೂರ್ವಕವಾಗಿ ಹೇಳಿದ್ದಲ್ಲ ಎಂದು ಕ್ಷಮೆಯಾಚಿಸಿದ್ದಾರೆ.




