ಭಾರತ ಆಕ್ರಮಿತ ಕಾಶ್ಮೀರದಲ್ಲಿ ಅತ್ಯಂತ ಹೀನಾಯ ಪರಿಸ್ಥಿತಿಯಿದೆ. ಆತ್ಮಾಭಿಮಾನ ಮತ್ತು ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹೋರಾಟದಲ್ಲಿ ಮುಗ್ಧರು ಬಲಿಯಾಗುತ್ತಿದ್ದಾರೆ . ಅಮೆರಿಕಾ ಮತ್ತು ಇತರೆ ಅಂತಾರಾಷ್ಟ್ರೀಯ ಸಂಸ್ಥೆಗಳು ಎಲ್ಲಿವೆ? ಈ ರಕ್ತಪಾತವನ್ನು ನಿಲ್ಲಿಸಲು ಅವು ಏಕೆ ಪ್ರಯತ್ನಿಸುತ್ತಿಲ್ಲ? ಎಂದು ಟ್ವೀಟ್ ಮಾಡಿದ್ದ ಪಾಕ್ ಕ್ರಿಕೆಟಿಗ ಆಫ್ರಿದಿಯನ್ನು ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ , ಕ್ಯಾಪ್ಟನ್ ವಿರಾಟ್ ಕೊಹ್ಲಿ, ಬ್ಯಾಟ್ಸಮನ್ ಸುರೇಶ್ ರೈನಾ ತರಾಟಗೆ ತೆಗೆದುಕೊಂಡಿದ್ದಾರೆ.

“ನಮಗೆ ನಮ್ಮ ದೇಶವನ್ನು ಯಾವ ರೀತಿಯಾಗಿ ಮುನ್ನಡೆಸಬೇಕು ಎನ್ನುವುದು ತಿಳಿದಿದೆ,ಆ ಸಾಮರ್ಥ್ಯ ನಮಗಿದೆ. ನಾವು ಏನು ಮಾಡಬೇಕು ಎನ್ನುವುದನ್ನು ಹೊರಗಿನವರು ನಮಗೆ ಹೇಳಿಕೊಡುವ ಅಗತ್ಯವಿಲ್ಲ” ಎಂದು ಸಚಿನ್ ಪ್ರತಿಕ್ರಿಯಿಸಿದ್ದಾರೆ.

“ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮತ್ತು ಅದು ಹಾಗೆಯೇ ಮುಂದುವರಿಯುತ್ತದೆ ನನ್ನ ಪೂರ್ವಜರು ಜನಿಸಿದ ಕಾಶ್ಮೀರ ಧಾರ್ಮಿಕ ಸ್ಥಳವಾಗಿದೆ. ನಮ್ಮ ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ನಕಲಿ ಯುದ್ದವನ್ನು ನಿಲ್ಲಿಸುವಂತೆ ಶಾಹಿದ್ ಅಫ್ರಿದಿ ಪಾಕಿಸ್ತಾನ ಸೇನೆಯನ್ನು ಕೇಳಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ನಮಗೆ ರಕ್ತಪಾತವೂ ಬೇಕಿಲ್ಲ, ಹಿಂಸೆಯೂ ಬೇಕಿಲ್ಲ, ಶಾಂತಿ ಬೇಕು”. ಎಂದು ಸುರೇಶ್ ರೈನಾ ಖಡಕ್ ಆಗಿ ಹೇಳಿದ್ದಾರೆ.

” ಒಬ್ಬ ಭಾರತೀಯನಾಗಿ ದೇಶಕ್ಕೆ ಯಾವುದು ಉತ್ತಮ ಎಂಬ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಬೇಕು ಮತ್ತು ನನ್ನ ಹಿತಾಸಕ್ತಿ ಯಾವಾಗಲೂ ದೇಶದ ಹಿತ ಕಾಯುವುದನ್ನು ಹೊಂದಿರುತ್ತದೆ. ಅದನ್ನು ಯಾರಾದರೂ ವಿರೋಧಿಸಿದರೆ ನಾನು ಯಾವುದೇ ಕಾರಣ ಅವರಿಗೆ ಬೆಂಬಲ ಸೂಚಿಸುವುದಿಲ್ಲ”.ಕೆಲ ಸಂಗತಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಕೆಲವೊಮ್ಮೆ ವೈಯಕ್ತಿಕ ಆಯ್ಕೆಯಾಗಿರುತ್ತದೆ ಆ ವಿಚಾರಗಳ ಬಗ್ಗೆ ಸಂಪೂರ್ಣ ಜ್ಞಾನ ಮತ್ತು ಅದರ ಜಟಿಲತೆ ಬಗ್ಗೆ ಅರಿವು ಇಲ್ಲದಿದ್ದರೆ,ಆ ಬಗ್ಗೆ ನಾನು ಖಂಡಿತ ಪ್ರತಿಕ್ರಿಯಿಸುವುದಿಲ್ಲ ಆದರೆ ಖಂಡಿತವಾಗಿಯೂ ನನ್ನ ಮೊದಲ ಆದ್ಯತೆ ದೇಶದ ಪರವಾಗಿಯೇ ಇರುತ್ತದೆ”ಎಂದು ಕೊಹ್ಲಿ ಹೇಳಿದ್ದಾರೆ.




