No menu items!
9.2 C
Munich
Friday, May 1, 2026

ಸಲ್ಲು ದೋಷಿ, ಉಳಿದ ನಾಲ್ವರು‌ ಖುಲಾಸೆ…

Must read

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ಪ್ರಕಟವಾಗಿದೆ. ಇತರೆ ಆರೋಪಿಗಳಾದ ಸೈಫ್ ಅಲಿ ಖಾನ್, ಟಬು , ಸೋನಾಲಿ ಬೇಂದ್ರೆ ಮತ್ತು ನೀಲಂ ಕೋಠಾರಿ ಅವರನ್ನು ಖುಲಾಸೆಗೊಳಿಸಲಾಗಿದೆ‌.

ಜೋಧಪುರ್ ಚೀಫ್ ಜ್ಯುಡಿಸಿಯಲ್ ಮ್ಯಾನಿಸ್ಟ್ರೇಟ್ ಕೋರ್ಟ್ ಸಲ್ಮಾನ್ ಖಾನ್ ವಿರುದ್ಧದ 20ವರ್ಷಗಳ ಹಳೆಯ ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪನ್ನು ನೀಡಿದೆ.
ಕಂಕಣಿ ಗ್ರಾಮದಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್ 13 ರಂದು ಜೋದ್ ಪುರ್ ಕೋರ್ಟ್ ನಲ್ಲಿ ಅಂತಿಮ‌ ವಿಚಾರಣೆ ಆರಂಭವಾಗಿತ್ತು.


1998 ಅಕ್ಟೋಬರ್ 1ರಂದು ‘ಹಮ್ ಸಾಥ್ ಸಾಥ್ ಹೈ’ ಸಿನಿಮಾ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಕೃಷ್ಣಮೃಗಗಳನ್ನು ಬೇಟೆಯಾಡಿದ್ದರು. ಅವರ ಜೊತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟರಾದ ಸೈಫ್ ಅಲಿಖಾನ್ , ಸೋನಾಲಿ ಬೇಂದ್ರೆ, ಟಬು‌ ಮತ್ತು ನೀಲಂ ಅವರ ಮೇಲೂ ಆರೋಪ ಹೊರಿಸಲಾಗಿತ್ತು. ಸಲ್ಮಾನ್ ದೋಷಿ ಎಂದು ತೀರ್ಪು ಬಂದಿದ್ದು , ಶಿಕ್ಷೆಯ ಪ್ರಮಾಣ ಪ್ರಕಟವಾಗಬೇಕಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article