No menu items!
2.7 C
Munich
Friday, May 1, 2026

3ವರ್ಷದ ಬಾಲಕಿಯನ್ನು ರೇಪ್ ಮಾಡಿ ಬಾಕ್ಸ್ ನಲ್ಲಿ ತುಂಬಿಸಿದ ಪರಾರಿಯಾದ…!

Must read

ಯುವಕನೊಬ್ಬ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬಳಿಕ ಆಕೆಯನ್ನು ಬಾಕ್ಸ್ ನಲ್ಲಿ ತುಂಬಿ ಪರಾರಿಯಾದ ಪ್ರಕರಣ ಉತ್ತರ ಪ್ರದೇಶದ ರಾಮ್ಪುರ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಾಲಕಿಯ ನೆರಮನೆಯ 18 ವರ್ಷದ ಯುವಕ ಆರೋಪಿ. ಈ ಘಟನೆ ನಡೆದಿದ್ದು ಏಪ್ರಿಲ್ 2ರಂದು.


ಬಾಲಕಿ ಮನೆಯಲ್ಲಿ ಒಬ್ಬಳೇ ಇರುವಾಗ ಮನೆಗೆ ಬಂದ ಆರೋಪಿ ಚಾಕಲೇಟ್ ಆಮಿಷವೊಡ್ಡಿ ತನ್ನ ಮನೆಗೆ ಕರೆದುಕೊಂಡು‌ ಹೋಗಿ, ಅತ್ಯಾಚಾರ ಎಸಗಿದ್ದಾನೆ. ಆಕೆ‌ ಅಳಲಾರಂಭಿಸಿದಾಗ ಬಾಕ್ಸ್ ನಲ್ಲಿ ತುಂಬಿ ಲಾಕ್ ಮಾಡಿ ಪರಾರಿಯಾಗಿದ್ದಾನೆ.
ಬಾಲಕಿಯ ಅಳು, ಕಿರುಚವ ಶಬ್ಧ ಕೇಳಿ ಅಕ್ಕಪಕ್ಕದ ಮನೆಯವರುವ ಆರೋಪಿ ಮನೆಗೆ ಹೋಗಿ ಹುಡುಕಾಡಿದ್ದಾರೆ. ಮನೆಯಲ್ಲಿ ಆರೋಪಿ ಇರಲಿಲ್ಲ. ಅಳುವಿನ‌ ಶಬ್ಧ ಬಂದ ಕಡೆಗೆ ಹೋದಾಗ ಬಾಲಕಿ ಬಾಕ್ಸ್ ನಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ‌ ಪ್ರಕರಣ ದಾಖಲಾಗಿದ್ದು, ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article