ಮರಣವನ್ನಪ್ಪಿದಾಗ ಇಷ್ಟವಾದ ವಸ್ತುವನ್ನು ಜೊತೆಗಿಟ್ಟು ಅಂತ್ಯಸಂಸ್ಕಾರ ಮಾಡೋದು ಸಾಮಾನ್ಯ. ಆದರೆ , ಲಕ್ಷಗಟ್ಟಲೆ ಮೌಲ್ಯದ ಚಿನ್ನದೊಂದಿಗೆ ಅಂತ್ಯಸಂಸ್ಕಾರ ಮಾಡೋದನ್ನು ನೋಡಿದ್ದೀರ…?

ಆಶ್ಚರ್ಯವಾಗುತ್ತೆ, ಕೆರಬಿಯನ್ ದ್ವೀಪದಲ್ಲಿ ವ್ಯಕ್ತಿಯೊಬ್ಬರು ಬರೊಬ್ಬರಿ 65ಲಕ್ಷ ರೂ ಬೆಲೆ ಬಾಳುವ ಬಂಗಾರದ ಜೊತೆ ಸಮಾಧಿಯಾಗಿದ್ದಾರೆ…!

ಶೆರಾನ್ ಸುಖೆಡೋ (33) ಎಂಬಾತ ಕೆರಬಿಯನ್ ನ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಕೊಲೆಯಾಗಿದ್ದು, ಈತನ ಅಂತ್ಯಸಂಸ್ಕಾರವನ್ನು ಚಿನ್ನದೊಂದಿಗೆ ಮಾಡಿದ್ದಾರೆ.

ಕಳೆದವಾರ ಪತ್ನಿ ಹಾಗೂ ಪೋಷಕರ ಜೊತೆ ಶೂಟಿಂಗ್ ನಡೆಸುತ್ತಿದ್ದಾಗ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಜೀವನದುದ್ದಕ್ಕೂ ಮೈ ತುಂಬಾ ಚಿನ್ನಧರಿಸಿ ಓಡಾಡುತ್ತಿದ್ದರಿಂದ ಅದರೊಂದಿಗೇ ಅಂತ್ಯಸಂಸ್ಕಾರ ಮಾಡಿದ್ದಾರೆ. ಮೃತ ವ್ಯಕ್ತಿ ರಿಯಲ್ ಎಸ್ಟೇಟ್ ಮೂಲಕ ಕೋಟಿಗಟ್ಟಲೆಗಳಿಸಿದ್ದರಂತೆ.




