ಭಾರತದಲ್ಲಿ 2018 ರಿಂದ 2023 ರವರೆಗೆ 5 ವರ್ಷಗಳ ಅವಧಿಯಲ್ಲಿ ನಡೆಯಲಿರೋ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳ ಜಾಗತಿಕ ಮಾಧ್ಯಮ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ಪಡೆದುಕೊಂಡಿದೆ.
ಬರೋಬ್ಬರಿ 6138.1ಕೋಟಿ ರೂಗಳಿಗೆ ಮಾಧ್ಯಮ ಹಕ್ಕು ತನ್ನದಾಗಿಸಿಕೊಂಡಿದೆ.
ಇದೇ ಮೊದಲಬಾರಿಗೆ ಬಿಸಿಸಿಐ ಮಾಧ್ಯಮ ಹಕ್ಕು ವಿತರಣೆಗೆ ಇ-ಹರಾಜು ಆಯೋಜಿಸಿತ್ತು.

ಸ್ಟಾರ್ ನೆಟ್ ವರ್ಕ್, ಸೋನಿ ನೆಟ್ ವರ್ಕ್, ಜಿಯೋ ಟಿವಿಗಳ ನಡುವೆ ಭಾರಿ ಪೈಪೋಟಿ ನಡೆದಿದ್ದು, ಅಂತಿಮವಾಗಿ ಸ್ಟಾರ್ ನೆಟ್ ವರ್ಕ್ ಹಕ್ಕು ಪಡೆಯಿತು.




