ಬ್ರಾವೊ‌ ಆರ್ಭಟಕ್ಕೆ ನಲುಗಿದ ಮುಂಬೈ; ಚೆನ್ನೈ ಶುಭಾರಂಭ..!

Date:

ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲವಿನೊಂದಿಗೆ ಪುನರಾಗಮನ ಮಾಡಿದೆ. ಐಪಿಎಲ್ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನ್ನು‌ 1 ವಿಕೆಟ್ ನಿಂದ ಮಣಿಸುವ ಮೂಲಕ‌ ಮಹೇಂದ್ರ ಸಿಂಗ್ ಧೋನಿ‌ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಶುಭಾರಂಭ ಪಡೆದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ನಿಗಧಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ‌165 ರನ್ ಗಳಿಸಿತು.‌ ರೋಹಿತ್ ಶರ್ಮಾ 15, ಇಶಾನ್ ಕಿಶಾನ್ 40, ಸೂರ್ಯಕುಮಾರ್ 43, ಹಾರ್ದಿಕ್ ಪಾಂಡ್ಯ ಅಜೇಯ 22ಮತ್ತು ಕೃನಾಲ್ ಪಾಂಡ್ಯ ಅಜೇಯ‌ 41 ರನ್ ಗಳ ಕೊಡುಗೆ ನೀಡಿದರು.
ಚೆನ್ನೈ ಪರ ವ್ಯಾಟ್ಸನ್ 2 , ಇಮ್ರಾನ್ ತೈರ್ ಮತ್ತು ದೀಪಕ್ ಚಾಹ‌ ತಲಾ‌ 1 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಸಿಎಸ್ ಕೆ ಒಂದು ಹಂತದಲ್ಲಿ ಮುಂಬೈ ದಾಳಿಗೆ ತತ್ತರಿಸಿತ್ತು.‌ ಆದರೆ ಡ್ವೇನ್ ಬ್ರಾವೊ ಆರ್ಭಟದಿಂದ ಗೆಲುವು ತನ್ನದಾಗಿಸಿಕೊಂಡಿತು.


ಸೋಲಿನ ದವಡೆಯಲ್ಲಿದ್ದ ಚೆನ್ನೈ ಗೆ ಆಸರೆಯಾದ ಬ್ರಾವೊ ಕೇವಲ 30 ಎಸೆತಗಳಲ್ಲಿ 68ರನ್ ಗಳಿಸಿದರು.‌ ಇವರ ಆಟದಲ್ಲಿ‌7 ಸಿಕ್ಸ್ ಹಾಗೂ 3 ಬೌಂಡರಿಗಳಿದ್ದವು.
ಕೊನೆಯಲ್ಲಿ ಬ್ರಾವೊ ಔಟಾದಾಗ 6 ಎಸೆತಗಳಲ್ಲಿ 7 ರನ್ ಅಗತ್ಯವಿತ್ತು. ಗಾಯಗೊಂಡು ಪೆವಿಲಿಯನ್ ಸೇರಿದ್ದ ಕೇದರ್ ಜಾದವ್ ಕೊನೆಯ ಬ್ಯಾಟ್ಸಮನ್ ಆಗಿ ಅಂಗಣಕ್ಕೆ ಇಳಿದರು. ಒಂಟಿ ರನ್ ಕದಿಯುವುದು ಇವರಿಗೆ ಕಷ್ಟವಾಗಿತ್ತು. ಆದರೆ ಎದೆಗುಂದದೆ ತಲಾ 1 ಸಿಕ್ಸ್ 1 ಬೌಂಡರಿ ಬಾರಿಸಿ ಗೆಲುವು‌ ತಂದುಕೊಟ್ಟರು. ಇವರು ಒಟ್ಟಾರೆ ಅಜೇಯ 22 ರನ್ ಗಳನ್ನು ಗಳಿಸಿದರು.

ಇನ್ನುಳಿದಂತೆ ವ್ಯಾಟ್ಸನ್ 16, ಅಂಬಟಿ ರಾಯ್ಡು 22, ಸುರೇಶ್ ರೈನಾ 4, ನಾಯಕ ಧೋನಿ 5, ಜಡೇಜ 12, ಹರ್ಭಜನ್ ಸಿಂಗ್ 8 ಮಾರ್ಕ್‌ ವುಡ್‌1 ಹಾಗು ತಾಹಿರ್ ಅಜೇಯ 2 ರನ್ ಗಳಿಸಿದರು.
ಮುಂಬೈ ಪರ ಹಾರ್ದಿಕ್ ಪಾಂಡ್ಯ ಹಾಗೂ ಮಾರ್ಕಂಡೆ ತಲಾ‌ 3 ವಿಕೆಟ್ , ಮೆಕ್ಲಿಗನ್ , ರೆಹಮಾನ್ , ಬೂಮ್ರಾ ತಲಾ‌1 ವಿಕೆಟ್ ಪಡೆದರು.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...