ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮೊದಲಿಂದಲೂ ಸಮಸ್ಯೆಯಿದೆ.
ಆಗಾಗ ಈ ವಿಚಾರದಲ್ಲಿ ವಿವಾದ ಬುಗಿಲೇಳುತ್ತಲೇ ಇರುತ್ತದೆ. ಇದಕ್ಕಾಗಿ ಸಿನಿಮಾ ತಾರೆಯರೂ ಹೋರಾಟಕ್ಕೆ ಇಳಿಯುತ್ತಾರೆ.
ಇದೀಗ ತಮಿಳು ನಟ ಸಿಂಬು ಅವರು ಕನ್ನಡಿಗರ ಪರ ಮಾತಾಡಿದ್ದಾರೆ. ಕಾವೇರಿ ನದಿ ನೀರಿನ ಬಗ್ಗೆ ಮಾತಾಡಿದಾಗ ಕರ್ನಾಟಕದ ಜನತೆಗೆ ಕುಡಿಯಲು ನೀರಿಲ್ಲ ಸ್ವಾಮಿ, ಅವರಿಗೆ ಇಲ್ಲ ಎಂದ್ಮೇಲೆ ನಮಗೆಲ್ಲಿಂದ ಕೊಡ್ಬೇಕು ಎಂದು ಸಿಂಬು ಹೇಳಿದ್ದಾರೆ. ಸಿಂಬು ಅವರ ಮಾತು ಕನ್ನಡಿಗರಿಗೆ ಖುಷಿಕೊಟ್ಟಿದೆ. ನ್ಯಾಯಯುತವಾಗಿ ಮಾತಾಡಿದ ಸಿಂಬು ಪರ ಎಲ್ಲೆಡೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ.