ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಮದುವೆಯ ತಯಾರಿ ಭರದಿಂದ ನಡೆಯುತ್ತಿದೆ.
ಎರಡೂ ಕುಟುಂಬದವರು ಮದುವೆ ಆಮಂತ್ರಣ ಪತ್ರಿಕೆ ಹಂಚುವಲ್ಲಿ ಬ್ಯುಸಿ ಇದ್ದಾರೆ.
ಅಕ್ಟೋಬರ್ 22ರಂದು ಚಿರು-ಮೇಘನಾ ನಿಶ್ಚಿತಾರ್ಥ ನಡೆದಿತ್ತು. ಮೇ 2 ರಂದು ಮದುವೆ ನಡೆಯಲಿದೆ.
ಕೇರಳ ಸಿನಿರಂಗದ ಗಣ್ಯರು ಹಾಗೂ ಸ್ನೇಹಿತರಿಗೆ ಮೇಘನಾ ಆಮಂತ್ರಣ ನೀಡಿದ್ದು, ಕನ್ನಡ ಸಿನಿಮಾ ರಂಗದ ಸ್ನೇಹಿತರಿಗೆ ಆಮಂತ್ರಣ ನೀಡಲು ಶುರುಮಾಡಿದ್ದಾರೆ.