ಪ್ರಶ್ನೆ ಪತ್ರಿಕೆ ನೋಡಿ…ಯಾವದಕ್ಕೂ ಉತ್ತರ ಗೊತ್ತಿರದೇ ಇದ್ದಾಗ ವಿದ್ಯಾರ್ಥಿಗಳಿಗೆ ಶಾಕ್ ಆಗೋದು ಗ್ಯಾರೆಂಟಿ. ಆದರೆ, ಹಾಲ್ ಟಿಕೆಟ್ ನೋಡಿ ಶಾಕ್ ಆದ ಉದಾಹರಣೆ ನಿಮಗೇನಾದರು ಗೊತ್ತಿದ್ಯಾ?
ಬಿಹಾರ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಹಾಲ್ ಟಿಕೆಟ್ ನೀಡಿ ದಂಗಾಗಿದ್ದಾಳೆ…!
ಹೌದು, ಬಿಹಾರ ವಿವಿ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದು, ವಿದ್ಯಾರ್ಥಿನಿಯ ಫೋಟೋ ಬದಲಿಗೆ ಬಿಕಿನಿ ತೊಟ್ಟ ಹುಡುಗಿಯೊಬ್ಬಳ ಫೋಟೋ ಬಂದಿದ್ದು, ಇದನ್ನು ಕಂಡ ವಿದ್ಯಾರ್ಥಿನಿಗೆ ಶಾಕ್ ಆಗಿದೆ.
ದರ್ಭಾಂಗ ಜಿಲ್ಲೆಯ ಲಲಿತ್ ನಾರಾಯಣ್ ಮಿಥಿಲಾ ವಿವಿಯಲ್ಲಿ ಈ ಪ್ರಮಾದ ನಡೆದಿರೋದು. ಮಧುಬನಿಯ ಎಸ್ ಎಂ ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿಯ ಹಾಲ್ ಟಿಕೆಟ್ ನಲ್ಲಿ ಈ ಫೋಟೋ ಬಂದಿದೆ.
ಪರೀಕ್ಷೆಗಾಗಿ ಅರ್ಜಿಸಲ್ಲಿಸಿದ್ದ ವಿದ್ಯಾರ್ಥಿನಿ ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿಕೊಂಡಾಗ ಅದರಲ್ಲಿ ಫೋಟೋ ಬದಲಾಗಿರೋದನ್ನು ಕಂಡು ಆಕೆ ದಂಗಾಗಿದ್ದಾರೆ. ಆನ್ ಲೈನ್ ನಲ್ಲಿ ಅಪ್ ಮಾಡುವಾಗ ಸರಿಯಾಗಿಯೇ ಇತ್ತಂತೆ. ಇಂದಿನಿಂದ ಪರೀಕ್ಷೆ ಆರಂಭವಾಗಿದ್ದು, ವಿವಿ ಹಾಲ್ ಟಿಕೆಟ್ ಬದಲಿಸಿಕೊಟ್ಟಿಲ್ಲ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.