ಹಾಲಿ ಚಾಂಪಿಯನ್ ಭಾರತದ ಆತಿಥ್ಯದಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯಬೇಕಿದ್ದ 2018ರ ಏಷ್ಯಾಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸ್ಥಳಾಂತರಗೊಂಡಿದ್ದು , ಇದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಸೆ.13 ರಿಂದ 28ರವರೆಗೆ ಅಬುಧಾಬಿ ಹಾಗೂ ದುಬೈನಲ್ಲಿ ಬಿಸಿಸಿಐನ ಖರ್ಚುವೆಚ್ಚದಲ್ಲೇ ಟೂರ್ನಿ ನಡೆಯುತ್ತದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಕಾರಣ ಈ ಏಷ್ಯನ್ ಕ್ರಿಕೆಟ್ ಸಮಿತಿ (ಎಸಿಸಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಬಾರಿ ನಡೆಯುತ್ತಿರುವುದು 14ನೇ ಆವೃತ್ತಿಯ ಏಷ್ಯಕಪ್. ಮೊದಲ 12 ಆವೃತ್ತಿಗಳು ಏಕದಿನ ಮಾದರಿಯಲ್ಲಿ ನಡೆದಿವೆ. ಕಳೆದ ವರ್ಷ ಟಿ20ಮಾದರಿಯಲ್ಲಿ ನಡೆದಿತ್ತು. ಭಾರತ ಆತಿಥೇಯ ಬಾಂಗ್ಲಾವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.