ಎಲೆಕ್ಷನ್ ಹತ್ತಿರ ಬರುತ್ತಿದ್ದು, ಮತದಾರರನ್ನು ಸೆಳೆಯಲು ರಾಜಕಾರಣಿಗಳು ಸಿಕ್ಕಾಪಟ್ಟೆ ಸರ್ಕಸ್ ಮಾಡ್ತಿದ್ದಾರೆ…! ಹೊಸ ಹೊಸ ಪ್ರಯೋಗಗಳನ್ನೂ ಸಹ ಮಾಡ್ತಿರುವವರಿದ್ದಾರೆ. ಇದೀಗ ಈ ಬಾರಿ ಅಕ್ಷಯ ತೃತೀಯವನ್ನು ಕೆಲ ರಾಜಕಾರಣಿಗಳು ಅಸ್ತ್ರವಾಗಿಸಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ.
ಮಹಿಳೆಯರಿಗೆ ಚಿನ್ನ ಅಂದ್ರೆ ಪಂಚಪ್ರಾಣ…ಇನ್ನು ಅಕ್ಷಯ ತೃತೀಯದಂದು ಚಿನ್ನ ಮನೆಗೆ ಬಂತೆಂದರೆ ಅವರ ಸಂತೋಷಕ್ಕೆ ಪಾರವೇ ಇಲ್ಲ. ಇದನ್ನೇ ದಾಳವಾಗಿಸಿಕೊಂಡಿರುವ ಕೆಲವು ರಾಜಕಾರಣಿಗಳು ಬಂಗಾರದ ಬೇಟೆಗೆ ತಯಾರಾಗಿದ್ದಾರೆ.
ಏಪ್ರಿಲ್ 18ರಂದು ಅಕ್ಷಯ ತೃತೀಯವಿದ್ದು, ಚಿನ್ನದ ವ್ಯಾಪರ ಜೋರಾಗುವ ಲಕ್ಷಣವಿದೆ. ಚಿನ್ನದ ಗಿಫ್ಟ್ ನೀಡಿ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.