ಮಂಡ್ಯದ ಜೆಡಿಎಸ್ ಮಾಜಿ ಶಾಸಕ ಎಂ ಶ್ರೀನಿವಾಸ್ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದ್ದು,ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶ್ರೀನಿವಾಸ ಪುರದಲ್ಲಿ ನಡೆದಿದೆ.
ರವಿಕುಮಾರ್ (55), ವಿಜಿಯಮ್ಮ (45), ರತನ್ ಗೌಡ (35 ) ಆತ್ಮಹತ್ಯೆಗೆ ಯತ್ನಿಸಿದವರು. ಮೂವರ ಸ್ಥಿತಿಯೂ ಗಂಭೀರವಾಗಿದೆ. ಸಾವಿಗೆ ಮುನ್ನ ರತನ್ ಸೆಲ್ಫಿ ವೀಡಿಯೋವೊಂದನ್ನು ಮಾಡಿದ್ದಾರೆ.
ಅದರಲ್ಲಿ, ಹುಡುಗರನ್ನ ಹುಡುಗಿಯರು ಯಾವ ಯಾವ ರೀತಿ ಮೋಸ ಮಾಡುತ್ತಾರೆ ಎನ್ನುವುದಕ್ಕೆ ನನ್ನ ಪತ್ನಿ ವಿದ್ಯಾ ಉದಾಹರಣೆ. ನನ್ನ ಪತ್ನಿ ವಿದ್ಯಾ ತುಂಬಾ ತೊಂದರೆ ಕೊಡುತ್ತಿದ್ದಳು. ಆಕೆಗೆ ತುಂಬಾ ಹವ್ಯಾಸಗಳಿತ್ತು. ನನ್ನ ತಂದೆ-ತಾಯಿಗೆ ವಿಷ ಹಾಕಿಸಿ ಸಾಯಿಸಿ ಎಂದು ಹೇಳಿದ್ದಳು. ಆಗ ನಾನು ಈ ವಿಷಯದ ಬಗ್ಗೆ ಆಕೆಯೊಂದಿಗೆ ಮಾತನಾಡಿದೆ. ಇದು ನನ್ನ ಫೋನಿನಲ್ಲಿ ರೆಕಾರ್ಡ್ ಆಗಿತ್ತು. ಆದ್ರೆ ಇದೀಗ ಅದನ್ನು ಡಿಲೀಟ್ ಮಾಡಲು ಎತ್ಕೊಂಡು ಹೋಗಿದ್ದಾರೆ. ಬೇರೊಂದು ಮದುವೆಯಾದೆ. ಹೀಗಾಗಿ ನಮ್ಮ ಮನೆಯತ್ರ ಬಂದು ಗಲಾಟೆ ಮಾಡಿ ನನ್ನ ಮರ್ಯಾದೆ ತೆಗೆದಿದ್ದಾರೆ. ಇದಕ್ಕೆಲ್ಲ ಜೆಡಿಎಸ್ ಶಾಸಕ ಎಂ. ಶ್ರೀನಿವಾಸ್ ಹಾಗೂ ಆತನ ಬೆಂಬಲಿಗರಾದ ಕಸ್ತೂರಿ, ವಿನೋದ್, ವಿದ್ಯಾಶ್ರೀ, ಅವರ ಮಾವಂದಿರು, ಅವರ ಅಜ್ಜಿ ಭಾಗ್ಯಮ್ಮ, ರಮೇಶ್, ಹರಿಪ್ರಸಾದ್, ಅಲಮೇಲಮ್ಮ, ನಾಗರಾಜು ಅವರ ಮಗ ಚಂದ್ರ ಹಾಗೂ ತುಪ್ಪ ಶಶಿಯವೇ ಕಾರಣ. ಇದರ ಸಮಸ್ತ ಪ್ರತಿಯೊಂದು ದಾಖಲೆಗಳನ್ನು ಪೇಪರ್ ನಲ್ಲಿ ಬರೆದಿದ್ದೇನೆ. ಅಷ್ಟೇ ಅಲ್ಲದೇ ನಮ್ಮ ಮನೆಯಲ್ಲಿದ್ದ ಹಣ, ಚಿನ್ನಾಭರಣ ಹಾಗೂ ಕೀಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ನನ್ನ ಮೇಲೆ ಹಲ್ಲೆ ಕೂಡ ಮಾಡಿದ್ದರು. ಚಿಕಿತ್ಸೆ ತೆಗೆದುಕೊಳ್ಳಲು ನನ್ನ ಬಳಿ ಹಣವಿರಲಿಲ್ಲ. ಈ ಸಂಬಂಧ ಪೊಲೀಸರಿಗೆ ದೂರು ನೀಡಲು ಹೋದಾಗ ಅವರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ದಯವಿಟ್ಟು, ಈ ಜೆಡಿಎಸ್‍ಯಿಂದ ನನ್ನನ್ನು ಕಾಪಾಡಿ. ನನ್ನ ಸಾವಿಗೆ ನ್ಯಾಯ ಕೊಡಿಸಿ.
ಸಿದ್ದರಾಮಯ್ಯ ನೀವು ಎಲ್ಲ ಭಾಗ್ಯಗಳನ್ನು ನೀಡಿದ್ದೀರ. ಈಗ ಜೆಡಿಎಸ್ ಮುಕ್ತ ಭಾಗ್ಯವನ್ನು ನೀಡಿ. ಮಂಡ್ಯದಲ್ಲಿ ಎಂ. ಶ್ರೀನಿವಾಸ್ ಪುಂಡಾಟಿಕೆ ಆಟಗಳನ್ನು ನಿಲ್ಲಿಸಿ. ನನ್ನ ಸಾವಿಗೆ ರಕ್ಷಣೆ ನೀಡಿ. ರಮ್ಯಾ ಮೇಡಂ ನಾನು ನಿಮ್ಮ ಅಭಿಮಾನಿ. ದಯವಿಟ್ಟು ನನಗೆ ರಕ್ಷಣೆ ಕೊಡಿಸಿ, ಆ ಹುಡುಗಿಗೆ ಏನೂ ಆಗದಂತೆ ರಕ್ಷಣೆ ಕೊಡಿಸಿ ಎಂದು ರತನ್ ವಿಡಿಯೋದಲ್ಲಿ ಹೇಳಿದ್ದಾರೆ.