ಆಲ್ಜೀರಿಯನ್ ಮಿಲಿಟಿರಿ ವಿಮಾನವೊಂದು ಆಲ್ಜಿರ್ಸ್ ನ ಹೊರಗೆ ಪತನಗೊಂಡಿದೆ. ಅನೇಕ ಸಾವು ನೋವುಗಳು ಸಂಭವಿಸಿವೆ ಎಂದು ವರದಿಯಾಗಿದೆ.
ವಿಮಾನದಲ್ಲಿ 100ಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿಗಳಿದ್ದರು ಎಂದು ತಿಳಿದುಬಂದಿದೆ.ರಾಜಧಾನಿಯ ಪ್ರಮುಖ ರಸ್ತೆಯ ಬದಿಯಿಂದ ದಟ್ಟ ಕಪ್ಪು ಹೊಗೆ ಮೇಲೇಳುತ್ತಿರುವ ದೃಶ್ಯಗಳನ್ನು ಟಿವಿ ಪ್ರಸಾರಿಸಿದೆ. ವಿಮಾನ ಪತನಗೊಂಡ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ಹಾಗೂ ಜನಸಂದಣಿ ಇರುವುದೂ ದೃಶ್ಯಗಳಲ್ಲಿ ಕಾಣಿಸಿದೆ.
ವಿಮಾನದ ಬಾಲದ ತುದಿಯ ತುಣುಕು ಆಲಿವ್ ಮರದ ಮೇಲೆ ಸಿಕ್ಕಿಹಾಕಿಕೊಂಡಿದೆ. ನೈಋತ್ಯ ಆಲ್ಜೀರಿಯಾದ ಬೆಚಾರ್‌ನತ್ತ ಈ ವಿಮಾನ ಹೊರಟಿದ್ದಾಗ ದುರಂತ ಸಂಭವಿಸಿದೆ.