ಮೊಘಲ್ ಚಕ್ರವರ್ತಿ ಶಾಜಹಾನ್ ತನ್ನ ಪತ್ನಿ ಮುಮ್ತಾಜ್ ಳ ನೆನಪಿಗೆ ನಿರ್ಮಿಸಿದ್ದಾನೆ ಎನ್ನಲಾದ ಪ್ರೇಮಸೌಧ ತಾಜಮಹಲ್ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಕುತೂಹಲಕಾರಿ ಪ್ರಕರಣವೊಂದು ವಿಚಾರಣೆಯಲ್ಲಿದೆ.
ಶಹಜಹಾನ್ ತಾಜಮಹಲನ್ನು ತನಗೆ ಬರೆದುಕೊಟ್ಟಿದ್ದಾನೆಂದು ಉತ್ತರಪ್ರದೇಶದ ಸುನ್ನಿ ವಕ್ಫ್ ಮಂಡಳಿ ದಾವೆ ಹೂಡಿದೆ. ಪುರಾತತ್ವ ಸರ್ವೇಕ್ಷಣಾಲಾಯದ ಅಧೀನದಲ್ಲಿರುವ ಪ್ರೇಮಸೌಧವನ್ನು ತನಗೆ ಒಪ್ಪಿಸಬೇಕು ಎಂದು ವಕ್ಫ್ ಮಂಡಳಿ ಕೇಳಿದೆ.
ಸುಪ್ರೀಂಕೋರ್ಟ್ ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದು, ತಾಜ್ ಮಹಲ್ ಅನ್ನು ಶಹಜಹಾನ್ ಬರೆದುಕೊಟ್ಟಿರೋದಕ್ಕೆ ವಾರದೊಳಗೆ ಸಾಕ್ಷಿ ಒದಗಿಸಬೇಕು. ಆತನ ಸಹಿ ಇರುವ ಮೂಲ ದಾಖಲೆ ಒದಗಿಸಬೇಕು ಎಂದು ಸೂಚಿಸಿದೆ.