ಮದುವೆ ಮನೆಯಲ್ಲಿ ಡೆಕೋರೇಶನ್ ಮಾಡುವಾಗ ಬಲೂನ್ ಗ್ಯಾಸ್ ಸಿಡಿದು ಯುವಕನ ಕಾಲು ಛಿದ್ರಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರು ನಗರದ ಚರ್ಚ್ ನಲ್ಲಿ ನಡೆದಿದೆ.
ಇಕ್ಬಾಲ್ ಕಾಲು ಕಳೆದುಕೊಂಡ ಯುವಕ. ಮದುವೆಗಾಗಿ ಬಲೂನ್ ಡೆಕೋರೇಶನ್ ಮಾಡುವಾಗವ ಬಲೂನ್ ಗ್ಯಾಸ್ ಸ್ಪೋಟಿಸಿ ಕಾಲು ಛಿದ್ರವಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.