ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗದೆ ತಲೆಮರೆಸಿಕೊಂಡಿದ್ದ ಪೇದೆಯನ್ನು ಪೊಲೀಸರೇ ಹುಡುಕಿ ಮದುವೆ ಮಾಡಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ಹರಪ್ಪನಹಳ್ಳಿಯ ನಿವಾಸಿಗಳಾದ ಮಂಜುನಾಥ್ ಮತ್ತು ಮಂಜುಳ ಪರಸ್ಪರ ಪ್ರೀತಿಸ್ತಿದ್ರು. ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆಯಲ್ಲಿ ಕೆಲಸ ಪೇದೆಯಾಗಿದ್ದ ಕೆಲವು ತಿಂಗಳುಗಳಿಂದ ಮಂಜುಳ ಅವರನ್ನು ಮದುವೆಯಾಗಲು ನಿರಾಕರಿಸಿದ್ದ.
ಮಂಜುಳ ಮದುವೆ ಆಗುವಂತೆ ಪಟ್ಟು ಹಿಡಿದಿದ್ದರಿಂದ ಮಂಜುನಾಥ್ ತಲೆಮರೆಸಿಕೊಂಡಿದ್ದ. ಯುವತಿ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ಮಂಜುನಾಥ್ ನನ್ನು ಹಿಡಿದು ಮದುವೆ ಮಾಡಿಸಿದ್ದಾರೆ.