ಇದೊಂದು ವಿಚಿತ್ರ ಪ್ರೇಮಕಥೆ…! ಅರ್ಜೆಂನ್ಟೀನಾದ ಯುವತಿ ಮತ್ತು ಅಫ್ಘಾನಿಸ್ತಾನದ ಯುವಕನ ಪ್ರೀತಿ ಹುಟ್ಟಿದ್ದು ಸೋಶಿಯಲ್ ಮೀಡಿಯಾದಲ್ಲಿ. ಭಾರತಕ್ಕೆ ಬಂದು ದೆಹಲಿಯಲ್ಲಿ ಮದ್ವೆಯಾಗಿ ,ಇಲ್ಲಿಯೇ ವಾಸವಿದ್ರು. ಕಲಬರುಗಿಯಲ್ಲಿ ಸಂಬಂಧ ಮುರಿದು ಬಿತ್ತು…!
ಅರ್ಜೆನ್ಟೀನಾದ ಯುವತಿ ಡೇನಿಯಲ್ ಹಾಗೂ ಅಫ್ಘಾನಿಸ್ತಾದ ಯುವಕ ಅಹ್ಮದ್ ಜರೀಫ್ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದಾರೆ.
ಚಾಟ್ ಮಾಡ್ತಾ ಮಾಡ್ತಾ ಪರಿಚಯ ಸ್ನೇಹವಾಗಿದೆ. ವೀಡಿಯೋ ಕಾಲ್ ಶುರುವಾದ ಬಳಿಕ ನಿಧಾನಕ್ಕೆ ಪ್ರೀತಿ ಹುಟ್ಟಿದೆ.
ಬಳಿಕ ಇಬ್ಬರೂ ಒಪ್ಪಿ ಮದುವೆಯಾಗೋ ತೀರ್ಮಾನ ತಗೊಂಡ್ರು. ಭಾರತದಲ್ಲಿ ನೆಲಸಲು ನಿರ್ಧರಿಸಿದ್ರು. ದೆಹಲಿಯಲ್ಲಿ ಭೇಟಿಯಾಗಿ ಕಳೆದ ವರ್ಷ ನವೆಂಬರ್ ನಲ್ಲಿ ಮದುವೆಯಾಗಿದ್ದರು. ನಂತರ ಭಾರತದ ನಾನಾ ಕಡೆಗಳಲ್ಲಿ ಸುತ್ತಾಡಿ ಕರ್ನಾಟಕಕ್ಕೆ ಬಂದಿದ್ದಾರೆ.
ಐದು ದಿನಗಳ ಹಿಂದೆ ಕಲಬುರಗಿ ನಗರಕ್ಕೆ ಬಂದು ಹಾಗರಗಾ ರಸ್ತೆಯ ಮೆಕ್ಕಾ ಕಾಲೋನಿಯಲ್ಲಿ ಮನೆಮಾಡಿಕೊಂಡಿದ್ದರು.
ಜರೀಫ್ ಕುರಾನ್ ಬಗ್ಗೆ ಮಕ್ಕಳಿಗೆ ಟ್ಯೂಷನ್ ಹೇಳುವ ಕೆಲಸ ಮಾಡ್ತಿದ್ದ. ಇದ್ದಕ್ಕಿದ್ದಂತೆ ಜರೀಫ್ ಪತ್ನಿ ಡೇನಿಯಲ್ ಗೆ ಧಾರ್ಮಿಕ ಆಚರಣೆ ಆಚರಿಸುವ ಕುರಿತು ಒತ್ತಡ ಹಾಕಿದ್ದಾನೆ. ನಮಾಜ್ ಮಾಡ್ಬೇಕು ,ಕುರಾನ್ ಓದ್ಬೇಕು ಎಂದುಕಿರುಕುಳ ನೀಡಲಾರಂಭಿಸಿದ್ದಾನೆ. ಇದರಿಂದ ಜಗಳವಾಗಿ ಡೇನಿಯಲ್ ಮುಂಬೈನಲ್ಲಿನ ಅರ್ಜೆನ್ಟೀನಾದ ರಾಯಭಾರಿ ಕಚೇರಿಗೆ ದೂರು ನೀಡಿದ್ದಾಳೆ. ಅಲ್ಲಿನ ಅಧಿಕಾರಿ ಕಲಬುರಗಿ ನಗರದ ಎಸ್ ಪಿ ಕಚೇರಿಗೆ ಬಂದು ವಿಚಾರಿಸಿ ಡೇನಿಯಲಳನ್ನು ಕಚೇರಿಗೆ ಕರೆಸಿಕೊಂಡು ಕೌನ್ಸಿಲಿಂಗ್ ನಡೆಸಿ ಅರ್ಜೆನ್ಟೀನಾಕ್ಕೆ ವಾಪಸ್ಸು ಕಳುಹಿಸಿದ್ದಾರೆ.