ಜಮ್ಮು ಕಾಶ್ಮಿರಾದ ಕಥುವಾದಲ್ಲಿ 8 ವರ್ಷದ ಬಾಲಕಿ ಮೇಲೆ ಸತತ ಒಂದು ವಾರಗಳ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದಾದ್ಯಂತ ಖಂಡನೆ ವ್ಯಕ್ತವಾಗಿದೆ. ಆರೋಪಿಗಳಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಲಾಗುತ್ತಿದೆ.
ಆದರೆ, ಕೇರಳದಲ್ಲಿ ಖಾಸಗಿ ಬ್ಯಾಂಕ್ ನೌಕರನೊಬ್ಬ ಈ ಬಗ್ಗೆ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟು ಕೆಲಸ ಕಳೆದುಕೊಂಡಿದ್ದಾನೆ.
ಕೊಟಕ್ ಮಹಿಂದ್ರಾ ಬ್ಯಾಂಕ್ ನ ಕೊಚ್ಚಿ ಶಾಖೆಯ ಅಸಿಸ್ಟೆಂಟ್ ಮ್ಯಾನೇಜರ್ ವಿಷ್ಣುನಂದಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿಕೃತ ಮನಸ್ಥಿತಿಯನ್ನು ಕಾಮೆಂಟ್ ಮೂಲಕ ತೋರಿಸಿದ್ದ.
ಬಾಲಕಿ ಈ ವಯಸ್ಸಲ್ಲೇ ಸತ್ತಿದ್ದು ಒಳ್ಳೆಯದಾಯ್ತು. ಇಲ್ದಿದ್ರೆ ದೊಡ್ಡವಳಾಗಿ ಭಾರತದಲ್ಲಿ ಬಾಂಬ್ ಗಳನ್ನು ಎಸೆಯುತ್ತಿದ್ದಳು ಎಂದು ವಿಷ್ಣು ಫೇಸ್ ಬುಕ್ ನಲ್ಲಿ ಕಮೆಂಟ್ ಮಾಡಿದ್ದ. ಇದನ್ನು ಜನ ಖಂಡಿಸಿದ್ದರು. ಈತನನ್ನು ಡಿಸ್‌ಮಿಸ್ ಮಾಡುವಂತೆ ಹ್ಯಾಶ್ ಟ್ಯಾಗ್ ಮೂಲಕ ಆಗ್ರಹಿಸಲಾಗಿತ್ತು. ವಿಷ್ಣುವನ್ನು ಕೋಟಕ್ ಮಹಿಂದ್ರಾ ಬ್ಯಾಂಕ್ ಕೆಲಸದಿಂದ ವಜಾಗೊಳಿಸಿದೆ.