ಮದುವೆಯಾಗಿ 11ವರ್ಷದ ಬಳಿಕ 3ಮಕ್ಕಳ ತಾಯಿಯೊಬ್ಬಳು ತನ್ನ ಪ್ರಿಯಕರನ ಜೊತೆ ಓಡಿ ಹೋದ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯ ಈಸ್ಟ್ ಕಾಲೋನಿಯಲ್ಲಿ ನಡೆದಿದೆ.
ಮನೋಜ್ ಕುಮಾರ್ ಎಂಬುವವರ ಪತ್ನಿ ಪಕ್ಕದ ಮನೆಯ ಯುವಕನೊಂದಿಗೆ ಓಡಿ ಹೋದವಳು. ಮನೋಜ್ ವೀಡಿಯೋ ಗ್ರಾಫರ್. ಈ ದಂಪತಿಗೆ ಎರಡು ಗಂಡು ಮತ್ತು ಒಂದು ಹೆಣ್ಣು ಮಗುವಿದೆ.
ಮನೋಜ್ ಕೆಲಸದ ಸಲುವಾಗಿ ಬೇರೆ ಊರಿಗೆ ಹೋದಾಗ ಪತ್ನಿ ಇಬ್ಬರು ಮಕ್ಕಳ ಜೊತೆ ಪಕ್ಕದ ಮನೆ ಯುವಕನೊಡನೆ ಓಡಿ ಹೋಗಿದ್ದಾಳೆ. ಏಪ್ರಿಲ್ 8ರಂದು ಮನೋಜ್ ಪೊಲೀಸ್ ಠಾಣೆಗೆ , ನಂತರ ಡಿಐಜಿ ಕಚೇರಿಗೆ ದೂರು ನೀಡಿದ್ದರೂ ಪ್ರಯೋಜವಾಗಿಲ್ಲ . ಆಶ್ವಾಸನೆ ಮಾತ್ರ ಸಿಕ್ಕಿರೋದಾಗಿ ವರದಿಯಾಗಿದೆ. ಪುಸ್ತಕ ತರಲು ಅಣ್ಣಂದಿರ ಜೊತೆ ಹೋದ ಅಮ್ಮ ವಾಪಾಸ್ಸು ಬಂದಿಲ್ಲ ಎಂದು ಮನೋಜ್ ಕುಮಾರ್ ಅವರ ಮಗಳು ಹೇಳಿದ್ದಾಳೆ.