ಕಥುವಾದಲ್ಲಿ ನಡೆದ 8ವರ್ಷದ ಬಾಲಕಿ ಮೇವಿನ ಅತ್ಯಾಚಾರ ,ಕೊಲೆ ಪ್ರಕರಣದ ವಿರುದ್ಧ ರಾಷ್ಟ್ರ , ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಯಾಗುತ್ತಿರುವ ಬೆನ್ನಲ್ಲೇ ಗುಜರಾತ್ ನ ಸೂರತ್ ನಲ್ಲಿ ಅಂತಹದ್ದೇ ಘಟನೆ ನಡೆದಿರೋದು ಬೆಳಕಿಗೆ ಬಂದಿದೆ.
ಸೂರತ್ ನ ಭೆಸ್ತಾನ ಪ್ರದೇಶದಲ್ಲಿ ಏಪ್ರಿಲ್ 6 ರಂದು 9 ವರ್ಷದ ಬಾಲಕಿ ಶವ ಸಿಕ್ಕಿದ್ದು, ಆಕೆಯ ಮೇಲೆ ನಿರಂತ 5 ದಿನ ಅತ್ಯಾಚಾರ ಎಸಗಿ 8 ದಿನಗಳ ಕಾಲ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ.
ಮರದ ಆಯುಧಗಳಿಂದ ಚಿತ್ರ ಹಿಂಸೆ ನೀಡಲಾಗಿದೆ. ಗುಪ್ತಾಂಗ ಸೇರಿದಂತೆ ಇಡೀ ದೇಹದಲ್ಲಿ 80 ಗಾಯಗಳಾಗಿವೆ. ಕತ್ತು ಹಿಸಕಿ ಸಾಯಿಸಲಾಗಿದೆ ಎಂದು ಸುಮಾರು 5 ಗಂಟೆಗಳ ಕಾಲ ನಡೆಸಿದ ಮರೋಣತ್ತರ ಪರೀಕ್ಷೆಯಿಂದ ತಿಳಿದಿದೆ. ಮೃತ ಬಾಲಕಿ ಬಗ್ಗೆ ಮಾಹಿತಿ ಸಿಕ್ಕಿಲ್ಲ.